ಹೇ ಬಾಯ್ಕಾಟ್ ಗ್ಯಾಂಗ್ ಎಂದು ಕಾಲೆಳೆದ ಪ್ರಕಾಶ್ ರಾಜ್

138

ಪ್ರಜಾಸ್ತ್ರ ಸಿನಿಮಾ ಸುದ್ದಿ

ಬಾಲಿವುಟ್ ನಟ ಶಾರೂಕ್ ಖಾನ್ ನಟನೆಯ ಪಠಾಣ್ ಮೂವಿ ಜನವರಿ 25ರಂದು ರಿಲೀಸ್ ಆಗಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ. ಕಳೆದ ಕೆಲ ತಿಂಗಳಿಂದ ಬಲಪಂಥೀಯ ವಿಚಾರಧಾರೆ ಹೊಂದಿದವರು ಬಿಟೌನ್ ಅಂಗಳದ ನಟ, ನಟಿಯರ ವಿರುದ್ಧ ಬಾಯ್ಕಾಟ್ ಅಭಿಯಾನ ನಡೆಸಿದ್ದರು.

ಶಾರೂಕ್-ದೀಪಿಕಾ ನಟನೆಯ ಪಠಾಣ್ ಚಿತ್ರದ ಹಾಡೊಂದರಲ್ಲಿನ ಬಟ್ಟೆಯ ವಿಚಾರವಾಗಿ ಗಲಾಟೆ ಮಾಡಿ ಬಾಯ್ಕಾಟ್ ಶುರು ಮಾಡಿದ್ದರು. ಇದೀಗ ಅದೆಲ್ಲವನ್ನು ಮೀರಿ ಮೊದಲ ದಿನ ಭಾರತದಲ್ಲಿ 54 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಪಠಾಣ್ ಪರ ಬ್ಯಾಟ್ ಬಿಸಿರುವ ಸೌಥ್ ಸಿನಿ ನಟ ಪ್ರಕಾಶ್ ರಾಜ್,  ʼಹೇ ಬಾಯ್ಕಾಟ್‌ ಬಿಗೋಟ್ಸ್.. ಶ್‌.. #ಹಲ್ಲಾಬೋಲ್ ಕಿಂಗ್ ಖಾನ್ ಎಸ್‌ಆರ್‌ಕೆ ಈಸ್‌ ಬ್ಯಾಕ್‌, ಕೀಪ್‌ ರಾಕಿಂಗ್‌ ದೀಪಿಕಾʼ ಅಂತ ಬರೆದುಕೊಂಡು ಶಾರುಖ್‌ ಖಾನ್‌ ಹಾಗೂ ದೀಪಿಕಾ ಪಡುಕೋಣೆಯವರನ್ನು ಟ್ಯಾಗ್‌ ಮಾಡುವ ಮೂಲಕ ಚಿತ್ರವನ್ನು ಬೆಂಬಲಿಸಿದ್ದಾರೆ. ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!