ಕವಿಪವಿ 70-71ನೇ‌ ಘಟಿಕೋತ್ಸವ

255

ಪ್ರಜಾಸ್ತ್ರ ಸುದ್ದಿ

ಧಾರವಾಡ: ಶಿಕ್ಷಣ ಒಂದು ನಿರಂತರವಾದ ಪ್ತಕ್ರಿಯೆ ಆಗಿದ್ದು, ಜಿವನದ ದ್ದಕ್ಕೂ ಕಲಿಕೆ ನಿರಂತರವಾಗಿರಬೇಕು ಎಂದು ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ‌ ಕರಿಸಿದ್ದಪ್ಪ ಅಭಿಪ್ರಾಯ ಪಟ್ಟರು. ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ 70 ಮತ್ತು 71ನೇ ವಾರ್ಷಿಕ ಘಟಿಕೊತ್ಸವದ ಪದವಿ ಪ್ರಮಾಣ ಸಮಾರಂಭದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು‌.

ಪ್ರಸ್ತುತ ಶೈಕ್ಷಣಿಕ ವಲಯದಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಅನೇಕ ಬದಲಾವಣೆ ಜೊತೆ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ಆಗಲಿದೆ ಎಂದ ಅವರು. ಶಿಕ್ಷಣದಿಂದ ಸಮಾಜದ‌ದಲ್ಲಿ ಎದುರಿಸುವ ಸಮಸ್ಯಗಳನ್ನು ಪರಿಹರಿಸುವಲ್ಲಿ ಶಿಕ್ಷಣವನ್ನು ಒಂದು ಅಸ್ತ್ರವನ್ನಾಗಿ ಬಳಕೆ ಮಾಡಬಹುದು ಎಂದರು. ಪದವಿ ಪಡೆದ ನಮ್ಮ ಜ್ಞಾನ ಉನ್ನತ ಮಟ್ಟದ್ದಾಗಿರಬೇಕು ಶಿಕ್ಷಣ ಸಮಾಜದ‌ ಒಳಿತಿಗಾಗಿ ಬಳಕೆ ಮಾಡಬೇಕು. ಶಿಕ್ಷಕ ವೃತ್ತಿ ಇಂದು ಸಮಾಜದಲ್ಲಿ ಗೌರವವಾದ ವೃತ್ತಿ ಆಗಿದೆ‌ ಎಂದರು.

ನಮ್ಮ ಶಿಕ್ಷಣ ನಮ್ಮ ಸಾಮರ್ಥ್ಯ ಪ್ರಚುರಪಡಿಸುವಂತೆ ಇರಬೇಕು. ನಮ್ಮ ಪದವಿ‌ಸಾಧನೆ ಹಚ್ಚಿ ದಂತೆ ಜವಾಬ್ದಾರಿ ಹೆಚ್ಚುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಉತ್ತಮ‌ ಪ್ರಜೆಯಾಗಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಬಿ‌.ಗುಡಸಿ ಮಾತನಾಡಿ ಶಿಕ್ಷಣ ನಮ್ಮ ಆತ್ಮವಿಶ್ವಾಸ ಹೆಚ್ಚಿಸಬೇಕು.ಪದವಿ ಮತ್ತು ಡಾಕ್ಟರೇಟ ಪಡೆದ‌ ವಿದ್ಯಾರ್ಥಿಗಳು,ಸಮಾಜಕ್ಕೆ ನಿಮ್ಮದೆ ಆದ ಕೊಡುಗೆಯನ್ನು ನೀಡಬೇಕು.ನಿಮ್ಮ ಜವಾಬ್ದಾರಿಯನ್ನು ಮರೆಯಬಾರದು. ‘ಪೇ ಬ್ಯಾಕ್ ಟು‌ ಸೋಸಾಯಿಟಿ’ಎಂಬ ಉದ್ದೇಶವನ್ನು ನಿಮ್ಮ ಮನಸ್ಸಿನಲ್ಲಿ ಹೊಂದಿರಬೇಕು ಎಂದು‌ ಸಲಹೆ ನೀಡಿದ ಅವರು ನಿಮ್ಮ ಗುರಿಯ ಮೇಲೆ ಮನಸ್ಸನ್ನು ಕೇಂದ್ರಕರಿಸಬೇಕು. ಭವಿಷ್ಯತ್ತಿನಲ್ಲಿ ನಿಮ್ಮದೆ ಆದ ಗುರಿ ಉದ್ದೇಶವನ್ನು ಹೋಂದಿರಬೇಕು ಎಂದರು.

ಇದೆ ಸಂದರ್ಭದಲ್ಲಿ ರಸಾಯನಶಾಸ್ತ್ರದ ಪ್ರಾಧ್ಯಾಪಕ ತೇಜರಾಜ್ ಅಮ್ಮಿನಭಾವಿ ಅವರಿಗೆ ವಜ್ರಮಹೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ವಿವಿಧ‌‌ ವಿಷಯಗಳಲ್ಲಿ ಡಾಕ್ಟರೇಟ್ ಪಡೆದ ವಿದ್ಯಾರ್ಥಿಗಳ ಗಣ್ಯರಿಂದ ಪ್ರಮಾಣಪತ್ರಗಳನ್ನು ಪಡೆದುಕೊಂಡರು. ಸಮಾರಂಭದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ.ಕೆ.ಟಿ.ಹನುಮಂತಪ್ಪ ಮೌಲ್ಯಮಾಪನ ಕುಲಸಚಿವರಾದ ಪ್ರೊ.ಎಚ್ ನಾಗರಾಜ್, ಸಿಂಡಿಕೇಟ್ ಸದಸ್ಯರು,ವಿದ್ಯಾವಿಷಯಕ್‌ ಪರಿಷತ್ತಿನ ಸದಸ್ಯರು ವಿವಿಧ ವಿಷಯ ನಿಖಾಯದ ಡೀನರು ಪ್ರಾಧ್ಯಾಪಕರು, ಸಂಶೋಧಕರು ವಿದ್ಯಾರ್ಥಿಗಳು ಹಾಜರಿದ್ದರು.




Leave a Reply

Your email address will not be published. Required fields are marked *

error: Content is protected !!