ಶಾಹಿ ಸ್ನಾನದಲ್ಲಿ 1 ಲಕ್ಷಕ್ಕೂ ಹೆಚ್ಚು ಭಕ್ತರು.. ಕೋವಿಡ್ ನಿಯಮ ನೀರುಪಾಲು

282

ಪ್ರಜಾಸ್ತ್ರ ಸುದ್ದಿ

ಹರಿದ್ವಾರ: ಉತ್ತರಾಖಂಡದ ಹರಿದ್ವಾರದಲ್ಲಿ ನಡೆಯುವ ಕುಂಭ ಮೇಳದಲ್ಲಿ 1 ಲಕ್ಷಕ್ಕೂ ಅಧಿಕ ಭಕ್ತರು ಸೇರಿದ್ದಾರೆ ಅನ್ನೋದು ತಿಳಿದು ಬಂದಿದೆ. ಕುಂಬ ಮೇಳದ ಪವಿತ್ರ ಶಾಹಿ ಸ್ನಾನದಲ್ಲಿ ಲಕ್ಷಾಂತರ ಭಕ್ತರು ಭಾಗವಹಿಸಿದ್ದು, ಕೋವಿಡ್ ನಿಯಮ ಪಾಲಿಸುವುದು ಕಷ್ಟವಾಗಿದೆ ಎಂದು ಐಜಿ ಸಂಜಯ ಗುಂಜ್ಯಾಲ್ ಹೇಳಿದ್ದಾರೆ.

ಮಹಾಶಿವಾರಾತ್ರಿ ಸಂದರ್ಭದಲ್ಲಿ ಮೊದಲ ಶಾಹಿ ಸ್ನಾನ ನಡೆಯಿತು. 2ನೇ ಶಾಹಿ ಸ್ನಾನ ಏಪ್ರಿಲ್ 12 ಸೋಮವಾರ ಹಾಗೂ 3ನೇ ಶಾಹಿ ಸ್ನಾನ ಏಪ್ರಿಲ್ 14ರಂದು ನಡೆಯಲಿದೆ. ಇದರಲ್ಲಿ 13 ಅಖಾಡಗಳ ಸಾಧುಗಳು ನದಿಯಲ್ಲಿ ಸ್ನಾನ ಮಾಡಲಿದ್ದಾರೆ. ಬಳಿಕ ಭಕ್ತರಿಗೆ ಅವಕಾಶ ನೀಡಲಾಗುತ್ತೆ.

ಇಂದು ಶುರುವಾಗಿರುವ ಪವಿತ್ರ ಸ್ನಾನದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಕಷ್ಟವಾಗಿದೆ. ಒಂದು ವೇಳೆ ಹಾಗೇ ಮಾಡಿದ್ರೆ ಕಾಲ್ತುಳಿತದಿಂದ ಪರಿಸ್ಥಿತಿ ಕೈ ಮೀರಬಹುದು ಎಂದು ಹೇಳಲಾಗ್ತಿದೆ. ಇದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಕೋವಿಡ್ 19 ನಿಯಮ ತಮಗೆ ಹೇಗೆ ಬೇಕೋ ಹಾಗೇ ಬದಲಾವಣೆ ಮಾಡಿಕೊಳ್ಳುತ್ತಿರುವ ಸರ್ಕಾರದ ವಿರುದ್ಧ ಕಿಡಿ ಕಾರುತ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!