ಬರೋಬ್ಬರಿ 3 ಸಾವಿರ ಶಾಲೆಗಳನ್ನು ಮುಚ್ಚಿದ ಸರ್ಕಾರ

205

ಪ್ರಜಾಸ್ತ್ರ ಸುದ್ದಿ

ಡೆಹರಾಡೋನ್: ಶಿಕ್ಷಣ ವ್ಯವಸ್ಥೆ ಹಾಗೂ ಸರ್ಕಾರಿ ಶಾಲೆಗಳಲ್ಲಿ ದಿನದಿಂದ ದಿನಕ್ಕೆ ಸುಧಾರಣೆ ತರಬೇಕಾದ ಸರ್ಕಾರಗಳು, ಮತ್ತಷ್ಟು ಹಾಳು ಮಾಡುತ್ತಿವೆ. ಹೀಗಾಗಿ ದೇಶದಲ್ಲಿ ಸರ್ಕಾರಿಗಳು ಶಾಲೆಗಳು ಮುಚ್ಚಲಾಗುತ್ತಿದೆ. ಇದೀಗ ಉತ್ತರಾಖಂಡದಲ್ಲಿ ಬರೋಬ್ಬರಿ 3 ಸಾವಿರ ಶಾಲೆಗಳನ್ನು ಮುಚ್ಚಲಾಗಿದೆ.

ಶಿಕ್ಷಣ ಇಲಾಖೆಯ ಡಿಜಿ ಬನಸಿಧರ್ ತಿವಾರಿ ಮಾಹಿತಿ ನೀಡಿದ್ದು, 3 ಸಾವಿರ ಶಾಲೆಗಳನ್ನು ತಕ್ಷಣದಿಂದಲೇ ತಾತ್ಕಾಲಿಕವಾಗಿ ಮುಚ್ಚಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಇಲ್ಲಿ 10 ವಿದ್ಯಾರ್ಥಿಗಳಿಂತ ಕಡಿಮೆ ಸಂಖ್ಯೆಯಲ್ಲಿ ಪ್ರವೇಶಾತಿಗಳಿವೆ. ಹೀಗಾಗಿ ಶಾಲೆಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗುತ್ತಿದೆ ಎಂದಿದ್ದಾರೆ.

ಇದು ನಿಜಕ್ಕೂ ಆಘಾತಕಾರಿ ಸಂಗತಿ. ಬಡವರು, ಕೂಲಿ ಕಾರ್ಮಿಕರು, ಮಧ್ಯಮ ವರ್ಗದವರು, ಹಿಂದುಳಿದ ಸಮುದಾಯದ ಮಕ್ಕಳ ಶಾಲೆಯಿಂದ ದೂರ ಉಳಿಯಲಿವೆ. ಲಕ್ಷ ಲಕ್ಷ ಫೀಸ್ ಕಟ್ಟಿ ಶಾಲೆಗೆ ಹೋಗಲು ಆಗದೆ ಶಿಕ್ಷಣದಿಂದ ವಂಚಿತರಾಗಿ ಮತ್ತೆ ಉಳ್ಳವರ ಕಾಲಾಳುಗಳಾಗಿ ಜೀವನ ಮಾಡುವ ಹೀನ ಪರಿಸ್ಥಿತಿ ಬರಲಿದೆ. ಇದಕ್ಕೆ ಸರ್ಕಾರಗಳೇ ವ್ಯವಸ್ಥಿತವಾಗಿ ಕುಮ್ಮಕ್ಕು ನೀಡುತ್ತಿವೆ ಎಂದು ಆಕ್ರೋಶ ವ್ಯಕ್ತವಾಗಿದ್ದು, ಇದನ್ನು ಸರ್ಕಾರಗಳು ಹೇಗೆ ಸರಿಪಡಿಸುತ್ತವೆ ಅನ್ನೋದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.




Leave a Reply

Your email address will not be published. Required fields are marked *

error: Content is protected !!