ಕುರ್ ಕುರೇ ಪ್ಯಾಕೇಟ್ ನಲ್ಲಿ 500 ನೋಟುಗಳು

193

ಪ್ರಜಾಸ್ತ್ರ ಸುದ್ದಿ

ರಾಯಚೂರು: ಕುರುಕುಲು ತಿಂಡಿಗಳು ಅಂದರೆ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಎಲ್ಲರಿಗೂ ಇಷ್ಟ. ಹೀಗಾಗಿ ಹತ್ತು ಹಲವು ಕಂಪನಿಗಳು ನಾಲಿಗೆ ರುಚಿಗೆ ತಕ್ಕಂತೆ ಪದಾರ್ಥಗಳನ್ನು ಬಿಡುಗಡೆ ಮಾಡುತ್ತವೆ. ಅದರಲ್ಲಿ ಕುರ್ ಕುರೇ ಸಹ ಒಂದು. ಇಂತಹ ಕುರ್ ಕುರೇ ಪ್ಯಾಕೇಟ್ ನಲ್ಲಿ 500 ರೂಪಾಯಿ ನೋಟುಗಳು ಬಂದಿದ್ದು, ಜನರು ಮುಗಿಬಿದ್ದು ಖರೀದಿಸುತ್ತಿದ್ದಾರೆ.

ಲಿಂಗಸಗೂರು ತಾಲೂಕಿನ ಹುನೂರು ಗ್ರಾಮದಲ್ಲಿ ಕುರ್ ಕುರೇ ಪ್ಯಾಕೇಟ್ ನಲ್ಲಿ 500 ಮುಖಬೆಲೆಯ ನೋಟುಗಳು ಬಂದಿವೆ. ಒಂದು ಪ್ಯಾಕೇಟ್ ನಲ್ಲಿ 5-6 ನೋಟುಗಳು ಬಂದರೆ ಮತ್ತೆ ಕೆಲವು ಪ್ಯಾಕೇಟ್ ನಲ್ಲಿ 3-4 ನೋಟುಗಳು ಬಂದಿವೆ. ಹೀಗೆ ಸುಮಾರು 20 ಸಾವಿರ ರೂಪಾಯಿ ತನಕ ನೋಟುಗಳು ಬಂದಿವೆ ಅನ್ನೋ ಸುದ್ದಿ ವ್ಯಾಪಾಕವಾಗಿ ಹರಡಿದೆ.




Leave a Reply

Your email address will not be published. Required fields are marked *

error: Content is protected !!