ಬಿಜೆಪಿ ನಾಯಕಿ ಖುಷ್ಬೂ ಅರೆಸ್ಟ್

350

ಪ್ರಜಾಸ್ತ್ರ ಸುದ್ದಿ

ಚೆನ್ನೈ: ನಟಿ ಹಾಗೂ ಬಿಜೆಪಿ ನಾಯಕಿ ಖುಷ್ಬೂ ಸುಂದರ ಅವರನ್ನ ಚೆನ್ನೈ ಪೊಲೀಸರು ಬಂಧಿಸಿದ್ದಾರೆ. ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ವಿಸಿಕೆ ನಾಯಕ ಥೋಲ್ ತಿರುಮಾವಾಲವನ್ ವಿರುದ್ಧ ಪ್ರತಿಭಟನೆಗೆ ತೆರಳುತ್ತಿದ್ದ ವೇಳೆ ಬಂಧಿಸಲಾಗಿದೆ.

ನಟಿ ಖುಷ್ಬೂ ಸೇರಿದಂತೆ ಹಲವರನ್ನ ಚೆನ್ನೈ ಹೊರವಲಯದ ಮುತ್ತುಕಾಡು ಬಳಿ ಬಂಧಿಸಲಾಗಿದೆ. ಪೊಲೀಸ್ ವಾಹನದಲ್ಲಿಯೇ ನಿಂತುಕೊಂಡು ಸೆಲ್ಫಿ ತೆಗೆದುಕೊಂಡು ಟ್ವೀಟರ್ ನಲ್ಲಿ ಪೋಸ್ಟ್ ಮಾಡಿರುವ ಖುಷ್ಬೂ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಂತಿಯುತವಾಗಿ ಪ್ರತಿಭಟನೆ ಮಾಡಲು ಅವಕಾಶವಿಲ್ಲವೆ? ಸಿಎಂ ಹಾಗೂ ಎಐಎಡಿಎಂಕೆ ನಾಯಕರು ಸ್ಪಷ್ಟನೆ ನೀಡಬೇಕು ಎಂದಿದ್ದಾರೆ.




Leave a Reply

Your email address will not be published. Required fields are marked *

error: Content is protected !!