ಐದು ಕೃತಿಗಳ ಲೋಕಾರ್ಪಣೆ

197

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಪಟ್ಟಣದ ಸಾರಂಗಮಠದ ಆವರಣದಲ್ಲಿ ವಿದ್ಯಾಚೇತನ ಪ್ರಕಾಶನದಿಂದ ಐದು ಪುಸ್ತಕಗಳ ಬಿಡುಗಡೆ ಸಮಾರಂಭ ನಡೆಯಿತು. ಮಕ್ಕಳ ಸಾಹಿತಿ ಹ.ಮ ಪೂಜಾರ ರಚಿತ ‘ಚತುರ ಚಿಣ್ಣರು’ ಕಥಾ ಸಂಕಲನ, ‘ಕೆಮ್ಮಿನ ಔಷಧಿ  ಉಚಿತ’ ನಗೆ ಹನಿ ಪುಸ್ತಕ, ಮುಳವಾಡದ ಮಕ್ಕಳ ಸಾಹಿತಿ ಪ.ಗು ಸಿದ್ದಾಪೂರ ರಚಿತ ‘ಅಕ್ಕರೆ ಅಜ್ಜ ನಾವು’ ಮತ್ತು ‘ಗಾಂಧಿ ತಾತ’ ಕವನ ಸಂಕಲನ, ಶಿಕ್ಷಕ, ಸಾಹಿತಿ ಎಸ್.ಎಸ್ ಸಾತಿಹಾಳ ರಚಿತ ‘ಏನು ಚಂದವೋ’ ಮಕ್ಕಳ ಕವನ ಸಂಕಲನವನ್ನು ಸಾರಂಗಮಠ ಗಚ್ಚಿನಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಬಿಡುಗಡೆ ಮಾಡಿದರು.

ಹಿರಿಯ ಜಾನಪದ ವಿದ್ವಾಂಸ ಡಾ.ಎಂ.ಎA ಪಡಶೆಟ್ಟಿ, ಎ.ಆರ್ ಹೆಗ್ಗನದೊಡ್ಡಿ, ಮಹಾದೇವ ರೆಬಿನಾಳ, ಹ.ಮ. ಪೂಜಾರ ಅವರು ಮಾತನಾಡಿದರು. ವೈದ್ಯಕೀಯ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿದ ವಿಜಯಪುರದ ವೈದ್ಯ ಎಸ್.ಬಿ ಮಿರಜಕರ, ರೇಖಾ, ಚುಕ್ಕಿ ಚಿತ್ರಕಲಾವಿದ ರಮೇಶ ಸಾಸನೂರ, ಮಕ್ಕಳ ಸಾಹಿತಿ ರಾ.ಶಿ ವಾಡೇದ ಅವರನ್ನು ಗೌರವಿಸಲಾಯಿತು.

ಎಸ್.ಎಸ್ ಸಾತಿಹಾಳ ಸ್ವಾಗತಿಸಿದರು. ಎಸ್.ಕೆ ಗುಗ್ಗರಿ ನಿರೂಪಿಸಿದರು. ರಾಚು ಕೊಪ್ಪಾ ವಂದಿಸಿದರು.




Leave a Reply

Your email address will not be published. Required fields are marked *

error: Content is protected !!