ನಾಳೆಯಿಂದ ಮಾವು ಮೇಳ

212

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕೋವಿಡ್ ಕಾರಣದಿಂದ ಕಳೆದ ಮೂರು ವರ್ಷಗಳಿಂದ ನಿಂತಿದ್ದ ಮಾವು ಮೇಳೆ ನಾಳೆಯಿಂದ ಪ್ರಾರಂಭವಾಗುತ್ತಿದೆ. ಲಾಲ್ ಬಾಗ್ ಮಾವು ಮೇಳದಲ್ಲಿ 100 ಮಳಿಗೆಗಳನ್ನು ತೆರೆಯಲಾಗಿದೆ. ಮೇಳಕ್ಕೆ ಸಿಎಂ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ.

ಇದರ ಜೊತೆಗೆ ಬೆಂಗಳೂರಿನಲ್ಲಿರುವ 200ಕ್ಕೂ ಹೆಚ್ಚು ಹಾಪ್ ಕಾಮ್ಸ್ ಗಳಲ್ಲಿಯೂ ಮಾವು, ಹಲಸಿನ ಮೇಳೆ ನಡೆಯಲಿದೆ. ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ, ಲಾಲ್ ಬಾಗ್ ವತಿಯಿಂದ ವಿವಿಧ ಕಡೆ ಮಾವು ಮೇಳ ಆಯೋಜಿಸಲಾಗಿದೆ.

ಮೇಳದಲ್ಲಿ ಬಾದಾಮಿ, ರಸಪುರಿ, ಮಲ್ಲಿಕಾ, ಮಲಗೋವಾ, ತೋತಾಪುರಿ, ಕಲ್ಮಿ, ಆಪೂಸ್, ಬಂಗನ್ ಪಲ್ಲಿ ಸೇರಿದಂತೆ ವಿವಿಧ ತಳಿಯ ಮಾವುಗಳು ಗ್ರಾಹಕರಿಗೆ ಸಿಗಲಿವೆ.




Leave a Reply

Your email address will not be published. Required fields are marked *

error: Content is protected !!