ಡೆಲ್ಲಿ ಮೇಲೆ ಸವಾರಿ ಮಾಡಿದ ಮುಂಬೈ

250

ಪ್ರಜಾಸ್ತ್ರ ಕ್ರೀಡಾ ಸುದ್ದಿ

ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಡುವಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 9 ವಿಕೆಟ್ ಅಂತರದಿಂದ ಗೆಲುವು ದಾಖಲಿಸಿದೆ. ಶ್ರೇಯಸ್ ಅಯ್ಯರ್ ಬಳಗ ನೀಡಿದ ಸಾಧಾರಣ 111 ರನ್ ಗಳ ಗುರಿಯನ್ನ 1 ವಿಕೆಟ್ ಕಳೆದುಕೊಂಡು 14.2 ಓವರ್ ಗಳಿಗೆ ಕಂಪ್ಲೀಟ್ ಮಾಡಿದೆ.

ಇಂಡಿಯನ್ಸ್ ಪರ ಇಶಾನ್ ಕಿಶಾನ್ 72 ನಾಟೌಟ್, ಸೂರ್ಯಕುಮಾರ ಯಾದವ್ 12 ನಾಟೌಟ್ ಆಗಿ ಉಳಿದ್ರು. ಡಿ ಕಾಕ್ 26 ರನ್ ಗೆ ಔಟ್ ಆದ. ಈಗಾಗ್ಲೇ ಪ್ಲೇ ಆಫ್ ಸ್ಥಾನ ತಲುಪಿರುವ ಮುಂಬೈ ಇಂಡಿಯನ್ಸ್ ತನ್ನ ಸ್ಥಾನವನ್ನ ಮತ್ತಷ್ಟು ಭದ್ರಪಡಿಸಿಕೊಂಡಿತು. ಡೆಲ್ಲಿ ಪರ ಎನ್ ರಿಚ್ 1 ವಿಕೆಟ್ ಪಡೆದ.

ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಹೀಗಾಗಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಪಡೆಗೆ ಆರಂಭದಲ್ಲಿ ಆಘಾತವಾಯ್ತು. ಬೌಲ್ಟ್ ಮೊದಲ ಓವರ್ ನ 2 ಬೌಲ್ ಗೆ ಶಿಖರ ಧವನ್ ಔಟ್ ಆಗಿ ಹೊರ ನಡೆದ. 3ನೇ ಓವರ್ ನಲ್ಲಿ ಪೃಥ್ವಿ ಶಾ 10 ರನ್ ಗೆ ಔಟ್ ಆದ. ಹೀಗಾಗಿ ಶ್ರೇಯಸ್ ಟೀಂ ಒತ್ತಡಕ್ಕೆ ಸಿಲುಕಿತು.

ನಂತರ ಬಂದ್ ಕ್ಯಾಪ್ಟನ್ ಶ್ರೇಯಸ್ 25, ಪಂಥ 21, ಸ್ಟೋನಿಯ್ಸ್ 2, ಹಿಟ್ಮೈರ್ 11, ಹರ್ಷಾಲ್ ಪಟೇಲ್ 5, ಅಶ್ವಿನ್ 12 ರನ್ ಬಾರಿಸಿ ಔಟ್ ಆದ್ರು. ದುಬೈ 7, ರಬಡಾ 12 ರನ್ ಗಳಿಸಿ ನಾಟೌಟ್ ಆಗಿ ಉಳಿದ್ರು. ಮುಂಬೈ ಪರ ಬೌಲ್ಟ್ 3, ಬೂಮ್ರಾ 3 ವಿಕೆಟ್ ಪಡೆದು ಮಿಂಚಿದ್ರು. ಕಲ್ಟರ್ ಹಾಗೂ ಚಾಹಲ್ ತಲಾ 1 ವಿಕೆಟ್ ಪಡೆದ್ರು.


TAG


Leave a Reply

Your email address will not be published. Required fields are marked *

error: Content is protected !!