ಮಿಜೋರಾಂ ಚುನಾವಣೆ, ಮತ ಎಣಿಕೆ ಶುರು

238

ಪ್ರಜಾಸ್ತ್ರ ಸುದ್ದಿ

ಐಜ್ವಾಲ್: ಐದು ರಾಜ್ಯಗಳ ವಿಧಾನಸಭಾ ಚುನಾವಣೆ ನಡೆದಿದ್ದು, ಭಾನುವಾರ ನಾಲ್ಕು ರಾಜ್ಯಗಳ ಫಲಿತಾಂಶ ಪ್ರಕಟವಾಗಿದೆ. ಇಂದು ಮಿಜೋರಾಂ ರಾಜ್ಯದ ಮತ ಎಣಿಕೆ ಕಾರ್ಯ ನಡೆದಿದೆ. 40 ಕ್ಷೇತ್ರಗಳಿಗೆ 174 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.

ಮಿಜೋರಾಂನಲ್ಲಿ ಕ್ರೈಸ್ತ್ ಸಮುದಾಯದವರು ಹೆಚ್ಚಿನ ಪ್ರಮಾಣದಲ್ಲಿದ್ದಾರೆ. ಭಾನುವಾರ ಈಸ್ಟರ್ ಸಂಡೇ ಆಚರಣೆ ಹಿನ್ನಲೆಯಲ್ಲಿ ನಿನ್ನೆ ಮತ ಎಣಿಕೆ ಕಾರ್ಯ ನಡೆಸಲಿಲ್ಲ. ಹೀಗಾಗಿ ಇಂದು ಮತ ಎಣಿಕೆ ನಡೆಯುತ್ತಿದೆ. ಮಧ್ಯಾಹ್ನ 12 ಗಂಟೆಯಷ್ಟರಲ್ಲಿ ಫಲಿತಾಂಶ ತಿಳಿಯಲಿದೆ. ಇಲ್ಲಿ ಮಿಜೋ ನ್ಯಾಷನಲ್ ಫ್ರೆಂಟ್,  ಝೋರಂ ಪಿಪಲ್ ಮೊಮೆಂಟ್ ಹಾಗೂ ಕಾಂಗ್ರೆಸ್ ನಡುವೆ ಫೈಟ್ ಇದೆ.




Leave a Reply

Your email address will not be published. Required fields are marked *

error: Content is protected !!