ಮಿಜೋರಾಂನಲ್ಲಿ ರಾಹುಲ್ ಗಾಂಧಿಗೆ ಭವ್ಯ ಸ್ವಾಗತ

190

ಪ್ರಜಾಸ್ತ್ರ ಸುದ್ದಿ

ಐಜ್ವಾಲ್: ಮಿಜೋರಾಂ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಪಾದಯಾತ್ರೆ ನಡೆಸಿದರು. ಐಜ್ವಾಲ್ ಗೆ ಬಂದು ಇಳಿದ ನಂತರ, ಜನ್ಮಾರಿ ಜಂಕ್ಷನ್ ನಿಂದ ಪಾದಯಾತ್ರೆ ನಡೆಸಿದರು.

ಸುಮಾರು 4-5 ಕಿಲೋ ಮೀಟರ್ ಪಾದಯಾತ್ರೆಗೆ ಭವ್ಯ ಸ್ವಾಗತ ದೊರೆತಿದೆ. ರಸ್ತೆಯುದ್ದಕ್ಕೂ ಸಾಂಪ್ರದಾಯಿಕ ನೃತ್ಯಗಳು, ಕಲೆಗಳ ಪ್ರದರ್ಶನ ನಡೆಸಲಾಗಿದೆ. ಸಾರ್ವಜನಿಕರು, ಕಾಂಗ್ರೆಸ್ ಕಾರ್ಯಕರ್ತರು ಜೈಕಾರ ಕೂಗಿದರು. ಸಾರ್ವಜನಿಕರೊಂದಿಗೆ ಸಂವಾದ ನಡೆಸಿದರು.

ರಾಜಭವನದ ಹತ್ತಿರ ಪಾದಯಾತ್ರೆ ಕೊನೆಗೊಂಡಿತು. ಈ ವೇಳೆ ಮಾತನಾಡಿದ ಅವರು 1986ರಲ್ಲಿ ನನ್ಗೆ 16 ವರ್ಷ ಇದ್ದಾಗ ನನ್ನ ತಂದೆಯೊಂದಿಗೆ ಮಿಜೋರಾಂಗೆ ಬಂದಿದ್ದೆ. ಇಲ್ಲಿಯವರು ಸೌಮ್ಯ, ದಯೆ ಹಾಗೂ ಪ್ರೀತಿ ಜನರು ಎಂದರು. ನಾಳೆ ರಾಜ್ಯದ ಕಾಂಗ್ರೆಸ್ ನಾಯಕರೊಂದಿಗೆ ಸಭೆ ನಡೆಸಲಿದ್ದಾರೆ. ನಂತರ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಲಿದ್ದಾರೆ.

ಮಿಜೋರಾಂ ವಿಧಾನಸಭೆ 40 ಸದಸ್ಯರನ್ನು ಹೊಂದಿದೆ. ನವೆಂಬರ್ 7ರಂದು ಚುನಾವಣೆ ನಡೆಯಲಿದೆ.




Leave a Reply

Your email address will not be published. Required fields are marked *

error: Content is protected !!