‘ನನ್ನ ಮಗಳು ಎಸ್ಸಿ ಪ್ರಮಾಣಪತ್ರ ಪಡೆದಿರುವುದು ನಿಜ’

217

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಶಾಸಕ ಎಂ.ಪಿ ರೇಣುಕಾಚಾರ್ಯರ ಪುತ್ರಿ ಎಸ್ಸಿ ಪ್ರಮಾಣಪತ್ರ ಪಡೆದಿರುವುದು ನಿಜ ಎಂದು ಸ್ವತಃ ಶಾಸಕರೆ ಒಪ್ಪಿಕೊಂಡಿದ್ದಾರೆ. ನಾನು ಬೇಡ ಜಂಗಮ ಹೆಸರಿನಲ್ಲಿ ಎಸ್ಸಿ ಪ್ರಮಾಣಪತ್ರ ಪಡೆದಿಲ್ಲ. ನನ್ನ ಸಹೋದರ 2012ರಲ್ಲಿ ನಾನು ವಿರೋಧಿಸಿದರು ನನ್ನ ಮಗಳ ಸಹಿ ಪಡೆದು ಎಸ್ಸಿ ಪ್ರಮಾಣಪತ್ರ ಪಡೆದಿದ್ದಾರೆ. ಆದರೆ, ಯಾವುದೇ ಸೌಲಭ್ಯ ಪಡೆದಿಲ್ಲ ಎಂದಿದ್ದಾರೆ.

ಇದಕ್ಕೆ ಎಲ್ಲೆಡೆ ವಿರೋಧ ವ್ಯಕ್ತವಾಗಿದೆ. ಅದರಲ್ಲೂ ತಳವಾರ, ಪರಿವಾರ ಸಮಾಜದವರು ಈ ವಿಚಾರದಲ್ಲಿ ಆಕ್ರೋಶ ಹೊರ ಹಾಕುತ್ತಿದ್ದಾರೆ. ಸರ್ಕಾರ ಆದೇಶ ಹೊರಡಿಸಿದರೂ ಇದುವರೆಗೂ ತಳವಾರ, ಪರಿವಾರ ಸಮಾಜದವರಿಗೆ ಎಸ್ಟಿ ಪ್ರಮಾಣಪತ್ರ ನೀಡುತ್ತಿಲ್ಲ. ಆದರೆ, ಅವಕಾಶ ಇರದೆ ಇದ್ದರೂ ಶಾಸಕರ ಪುತ್ರಿಗೆ ಎಸ್ಸಿ ಪ್ರಮಾಣ ಪತ್ರ ನೀಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಯಾವ ಆಧಾರದ ಮೇಲೆ ಶಾಸಕ ರೇಣುಕಾಚಾರ್ಯ ಪುತ್ರಿಗೆ ಎಸ್ಸಿ ಪ್ರಮಾಣಪತ್ರ ನೀಡಲಾಗಿದೆ ಅನ್ನೋದು ತಿಳಿಯಬೇಕಿದೆ. ನೀಡಿದ, ಪಡೆದ ಎಲ್ಲರಿಗೂ ಶಿಕ್ಷೆಯಾಗಬೇಕು ಎಂದು ಆಗ್ರಹಿಸಲಾಗುತ್ತಿದೆ. 2012ರಲ್ಲಿ ಎಸ್ಸಿ ಪ್ರಮಾಣಪತ್ರ ಪಡೆದು ಅದರಿಂದ ಯಾವುದೇ ಸೌಲಭ್ಯ ಪಡೆದಿಲ್ಲ ಅನ್ನೋ ಮಾತು ಎಷ್ಟು ಸತ್ಯ? ಪ್ರಮಾಣಪತ್ರ ಪಡೆದಿದ್ದು ಯಾವ ಕಾರಣಕ್ಕೆ ಎಂದು ಹಲವು ರಾಜಕೀಯ ನಾಯಕರು ವಾಗ್ದಾಳಿ ನಡೆಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!