‘ನಿರಾಳ’ ಅಭಿನಂದನ ಗ್ರಂಥ ಲೋಕಾರ್ಪಣೆ

677

ಸಿಂದಗಿ: ಪಟ್ಟಣದ ಶ್ರೀಸಾತವೀರೇಶ್ವರ ಸಭಾ ಭವನದಲ್ಲಿ ಸಂಶೋಧಕ ಡಾ.ಎಂ.ಎಂ ಪಡಶೆಟ್ಟಿ ಅವರ ಅಭಿನಂದನ ಗ್ರಂಥ ‘ನಿರಾಳ’ ಬಿಡುಗಡೆಗೊಂಡಿತು. ಡಾ.ಎಂ.ಎಂ ಕಲಬುರ್ಗಿ ಪತ್ನಿ ಉಮಾದೇವಿ ಗ್ರಂಥ ಬಿಡುಗಡೆ ಮಾಡಿದ್ರು.

ಕೃತಿ ಬಿಡುಗಡೆ ಮಾಡಿ ಮಾತ್ನಾಡಿದ ಉಮಾದೇವಿ ಕಲಬುರ್ಗಿ, ಡಾ.ಎಂ.ಎಂ ಕಲಬುರ್ಗಿ ಹಾಗೂ ಡಾ.ಎಂ.ಎಂ ಪಡಶೆಟ್ಟಿ ಅವರ ನಡುವಿನ ಗುರು ಶಿಷ್ಯರ ಸಂಬಂಧದ ಬಗ್ಗೆ ಹೇಳಿದ್ರು. ಸಂಶೋಧಕರಿಬ್ಬರ ನಡುವಿನ ಒಡನಾಟ ಮೆಲಕು ಹಾಕಿದ್ರು.

ಅಭಿನಂದನ ನುಡಿಯಾಡಿದ ಹಿರಿಯ ಸಾಹಿತಿ ಡಾ.ಗುರುಲಿಂಗ ಕಾಪಸೆ, ಶೈಕ್ಷಣಿಕವಾಗಿ ಸಿಂದಗಿ ಇಂಡಿ ತಾಲೂಕನ್ನ ಹಿಂದಿಕ್ಕಿದೆ. ಸಾಹಿತ್ಯದಲ್ಲಿ ಇಂಡಿ ಒಂದಿಷ್ಟು ಮುಂದಿದೆ ಅಂತಾ ಹೇಳಿದ್ರು. ಖ್ಯಾತ ಕವಿ ಮಧುರ ಚೆನ್ನರನ್ನ ನೀಡಿದ ನೆಲ ಇಂಡಿ. ಅವರನ್ನ ಇನ್ನಷ್ಟು ಪ್ರಚುರ ಪಡಿಸುವ ಕೆಲಸ ಹಲಸಂಗಿ ಗೆಳೆಯರ ಬಳಗ ಮಾಡ್ತಿದೆ. ಅದೇ ರೀತಿ ಸಿಂದಗಿಯಲ್ಲಿ ಪಡಶೆಟ್ಟಿ, ಚನಪ್ಪ ಕಟ್ಟಿ ಹಾಗೂ ರಾಂಪೂರ ಅವರು ಸಾಹಿತ್ಯದ ಕೆಲಸ ಮಾಡ್ತಿದ್ದಾರೆ ಅಂತಾ ಹೇಳಿದ್ರು.

ಡಾ.ಎಂ.ಎಂ ಪಡಶೆಟ್ಟಿ ದಂಪತಿಗೆ ಗೌರವ ಸಮರ್ಪಣೆ

ನಿರಾಳ ಗ್ರಂಥದ ಪ್ರಧಾನ ಸಂಪಾದಕ ಜಾನಪದ ತಜ್ಞ ಡಾ.ಶ್ರೀರಾಮ ಇಟ್ಟಣ್ಣವರ ಮಾತ್ನಾಡಿ, ಪಡಶೆಟ್ಟಿ ಅವರು ಗ್ರಾಮ್ಯ ಸಂವೇದನೆಯನ್ನ ಹೊಂದಿದ್ದಾರೆ. ಸದಾ ಅದರ ಬಗ್ಗೆಯೇ ಚಿಂತಿಸ್ತಾರೆ ಎಂದರು. ಭೌತಿಕವಾಗಿ ಗ್ರಾಮಗಳು ಆಧುನಿಕತೆಯಿಂದ ಕೂಡಿರ್ಲಿ. ಭಾವನಾತ್ಮಕವಾಗಿ ಬದಲಾಗಬಾರದು ಅಂತಾ ಹೇಳಿದ್ರು.

ಸಾರ್ಥಕ 70ನೇ ವರ್ಷಕ್ಕೆ ಕಾಲಿಡ್ತಿರುವ ಕಾರ್ಯಕ್ರಮದ ಕೇಂದ್ರಬಿಂದು ಡಾ.ಎಂ.ಎಂ ಪಡಶೆಟ್ಟಿ ಅವರಿಗೆ ಗೌರವ ಸಲ್ಲಿಸಲಾಯ್ತು. ಕಾರ್ಯಕ್ರಮದ ಸಾನಿಧ್ಯವನ್ನ ಗದಗ ಡಂಬಳ ಸಂಸ್ಥಾನಮಠದ ಜಗದ್ಗುರು ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ವಹಿಸಿಕೊಂಡಿದ್ರು. ಸಾರಂಗ ಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಅಧ್ಯಕ್ಷತೆ ವಹಿಸಿಕೊಂಡಿದ್ರು. ಊರನ ಹಿರಿಯ ಮಠದ ಶಿವಾನಂದ ಶಿವಾಚಾರ್ಯರು, ಮುಖ್ಯ ಅತಿಥಿಯಾಗಿ ಶಾಸಕ ಎಂ.ಸಿ ಮನಗೂಳಿ ಭಾಗವಹಿಸಿದ್ರು.

ವಿಧಾನ ಪರಿಷತ್ ಸದಸ್ಯ ಹಾಗೂ ಡಾ.ಎಂ.ಎಂ ಪಡಶೆಟ್ಟಿ ಅಭಿನಂದನ ಸಮಿತಿ ಅಧ್ಯಕ್ಷ ಅರುಣ ಶಹಾಪೂರ ಸ್ವಾಗತಿಸಿದ್ರು. ಎ.ಆರ್ ಹೆಗ್ಗನದೊಡ್ಡಿ, ಖಾದರ ಭಾಷಾ ಅಸ್ಕಿ ನಿರೂಪಿಸಿದ್ರು. ಡಾ.ಚನ್ನಪ್ಪ ಕಟ್ಟಿ ವಂದಿಸಿದ್ರು.




Leave a Reply

Your email address will not be published. Required fields are marked *

error: Content is protected !!