ಕಳ್ಳತನ ಆರೋಪ: ಯುವಕನ ಮೇಲೆ ಹಲ್ಲೆ

298

ಪ್ರಜಾಸ್ತ್ರ ಸುದ್ದಿ

ಮಂಗಳೂರು: ಕಳ್ಳತನ ಆರೋಪದ ಮೇಲೆ ಯುವಕನೊಬ್ಬನ ಮೇಲೆ ಹಲ್ಲೆ ಮಾಡಲಾಗಿದೆ. ಬಂಟ್ವಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕಲ್ಲಡ್ಕದ ಪಳನೀರು ಬಳಿ ಈ ಘಟನೆ ನಡೆದಿದೆ. ಬಾಳ್ತಿಲ ಗ್ರಾಮದ ನಿವಾಸಿ ಉದಯ ಎಂಬುವರು ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ವೀರಕಂಭ ನಿವಾಸಿ ಶ್ರೀನಿವಾಸ, ಕಲ್ಲಡ್ಕ ನಿವಾಸಿ ಪ್ರಶಾಂತ ಸೇರಿ ಇತರರು ಹಲ್ಲೆ ಮಾಡಿದ್ದಾರೆ ಎಂದು ದೂರು ನೀಡಲಾಗಿದೆ.

ಮನೆಯೊಂದರಲ್ಲಿ ಮೊಬೈಲ್ ಕಳ್ಳತನದ ಆರೋಪದ ಮೇಲೆ ಹಲ್ಲೆ ಮಾಡಲಾಗಿದೆ. ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




Leave a Reply

Your email address will not be published. Required fields are marked *

error: Content is protected !!