ಅಪರಾಧ ಕೃತ್ಯ ಪತ್ತೆಗೆ ರಾಜ್ಯದಲ್ಲಿ ಹೊಸ ಪೊಲೀಸ್ ಹುದ್ದೆ ಸೃಷ್ಟಿ

308

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಹೊಸ ಹುದ್ದೆ ಸೃಷ್ಟಿ ಮಾಡಲಾಗಿದೆ. ಗಂಭೀರ ಅಪರಾಧ ಕೃತ್ಯದ ಪತ್ತೆಗಾಗಿ ವಿಶೇಷ ಹುದ್ದೆ ಸೃಷ್ಟಿಸಲಾಗಿದೆ. ನಾಳೆ ಪೊಲೀಸ್ ಮಹಾನಿರ್ದೇಶಕರಿಗೆ ಅದರ ಪ್ರತಿಯನ್ನ ಸಿಎಂ ನೀಡಲಿದ್ದಾರೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಯಾವುದಾದರೊಂದು ಅಪರಾಧ ಕೃತ್ಯ ನಡೆದಾಗ ಆ ಸ್ಥಳಕ್ಕೆ ಈ ವಶೇಷ ತಂಡ ತೆರಳುತ್ತದೆ. ಎಲ್ಲ ಸಾಕ್ಷಾಧಾರಗಳನ್ನ ಕಲೆ ಹಾಕುವುದು, ಸಂರಕ್ಷಣೆ ಮಾಡುವುದು, ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸುವುದು, ತನಿಖಾಧಿಕಾರಿಗೆ ಸಾಕ್ಷಾಧಾರಗಳನ್ನ ಒದಗಿಸುವ ಕೆಲಸ ಮಾಡಲಿದೆ. ಈ ಕೆಲಸವನ್ನ ಈ ಮೊದ್ಲು ಸ್ಥಳೀಯ ಪೊಲೀಸ್ ಅಧಿಕಾರಿಗಳು ಮಾಡುತ್ತಿದ್ದರು ಎಂದರು.

ಮೊದಲ ಹಂತದಲ್ಲಿ ಅನುಭವಿ 206 ಅಧಿಕಾರಿಗಳಿಗೆ ಹುದ್ದೆಯನ್ನ ಮಂಜೂರು ಮಾಡಲಾಗ್ತಿದೆ. ಜುಲೈ 13ರಂದು ಮುಖ್ಯಮಂತ್ರಿಗಳು ಅಧಿಕೃತವಾಗಿ ಗೃಹ ಇಲಾಖೆಗೆ ನೀಡಲಿದ್ದಾರೆ. ಇದೇ ವೇಳೆ ಗೃಹರಕ್ಷಕ ದಳ, ಅಗ್ನಿಶಾಮಕ ದಳ, ಪೊಲೀಸ್ ಸೇವಾ ಪದಕ ನೀಡಲಿದ್ದಾರೆ ಎಂದು ತಿಳಿಸಿದ್ರು.




Leave a Reply

Your email address will not be published. Required fields are marked *

error: Content is protected !!