ಹೊಸ ವರ್ಷಾಚರಣೆ: ಸಿಲಿಕಾನ್ ಸಿಟಿಯಲ್ಲಿ ಖಾಕಿ ಪಹರೆ

302

ಬೆಂಗಳೂರು: ಡಿಸೆಂಬರ್ 31ರ ರಾತ್ರಿ ಹೊಸ ವರ್ಷಾಚರಣೆ ಸಂಭ್ರಮದ ವೇಳೆ ಯಾವುದೇ ರೀತಿ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ರು ಎಚ್ಚರ ವಹಿಸಿದ್ದಾರೆ. ಹೀಗಾಗಿ ನಗರದಲ್ಲಿ ಫುಲ್ ಸೆಕ್ಯೂರಿಟಿ ವ್ಯವಸ್ಥೆ ಮಾಡಲಾಗಿದ್ದು, ಈಗಾಗ್ಲೇ 134 ಕಡೆ ವಿಶೇಷ ತಪಾಸಣೆ ನಡೆಯುತ್ತಿದೆ. ಈ ಬಗ್ಗೆ ಸಂಚಾರಿ ವಿಭಾಗದ ಜಂಟಿ ಆಯುಕ್ತ ರವಿಕಾಂತೇಗೌಡ ಮಾಹಿತಿ ನೀಡಿದ್ದಾರೆ.

ಪಾರ್ಟಿ ಹಾಲ್, ಬಾರ್ ಆ್ಯಂಡ್ ರೆಸ್ಟೋರೆಂಟ್, ಹೋಟೆಲ್ ಸೇರಿದಂತೆ ಗುಂಪು ಗುಂಪಾಗಿ ಜನರು ಸೇರುವ ಸ್ಥಳಗಳಲ್ಲಿ ಪೊಲೀಸ್ರು ಪಹರೆ ನಡೆಸಲಿದ್ದಾರೆ. ಅಲ್ದೇ, ಆ ದಿನ 175 ಕಡೆ ತಪಾಸಣೆ ನಡೆಸಲಿದ್ದು ಕುಡಿದು ವಾಹನ ಚಾಲಾಯಿಸುವವರು ಸಿಕ್ಕಿ ಬಿದ್ದರೆ ಅವರ ಚಾಲನಾ ಪರವಾನಿಗೆ ಜಪ್ತಿ ಮಾಡಿ, ಸೆಕ್ಷನ್ 279ರ ಅಡಿ ವಿರುದ್ಧ ಕೇಸ್ ದಾಖಲಿಸಲಾಗುವುದು ಅಂತಾ ತಿಳಿಸಲಾಗಿದೆ. ಈಗಾಗ್ಲೇ 44 ಸಂಚಾರಿ ಪೊಲೀಸ್ ಠಾಣೆ ಸಿಬ್ಬಂದಿ ಪ್ರತಿ ದಿನ ಜಾಗ ಬದಲಾವಣೆ ಮಾಡಿ ತಪಾಸಣೆ ನಡೆಸಿದ್ದಾರೆ. ಹೀಗಾಗಿ ಹೊಸ ವರ್ಷದ ಸಂಭ್ರಮದ ಜೋಶ್ ನಲ್ಲಿ ಅನಾಹುತ ಮಾಡಿಕೊಳ್ಳದೆ ಹುಷಾರ್ ಆಗಿರಿ.




Leave a Reply

Your email address will not be published. Required fields are marked *

error: Content is protected !!