Search

ಒಲಂಪಿಕ್ಸ್ ಟೂರ್ನಿ ಮುಂದೂಡುವ ಸೂಚನೆ

331

ಟೋಕಿಯೋ: ಜಪಾನಿನ ಟೋಕಿಯೋದಲ್ಲಿ ನಡೆಯಬೇಕಿದ್ದ 2020ನೇ ಒಲಂಪಿಕ್ಸ್ ಕ್ರೀಡಾಕೂಟವನ್ನ ಮುಂದೂಡುವ ಸೂಚನೆ ನೀಡಲಾಗಿದೆ. ಈಗಾಗ್ಲೇ ಡೆಡ್ಲಿ ಕರೋನಾ ಎಲ್ಲೆಡೆ ವ್ಯಾಪಿಸಿದೆ. ಇರಾನ್, ಇಟಲಿ, ಜಪಾನ್ ನಾಡಿನಲ್ಲಿ ಕರೋನಾ ಅಪಾಯದ ಮಟ್ಟದಲ್ಲಿದೆ. ಹೀಗಾಗಿ ಒಲಂಪಿಕ್ಸ್ ಮುಂದೂಡುವ ಪ್ಲಾನ್ ನಡೆದಿದೆ.

ಈ ಬಗ್ಗೆ ಮಾತ್ನಾಡಿರುವ ಜಪಾನ್ ಪ್ರಧಾನಿ ಶಿಂಬೊ ಅಬೆ, ಒಲಿಂಪಿಕ್ಸ್ ಕ್ರೀಡಾಕೂಟವನ್ನ ಮುಂದೂಡದೆ ನಮ್ಗೆ ಬೇರೆ ವಿಧಿಯಿಲ್ಲವೆಂದು ಹೇಳಿದ್ದಾರೆ. ಕೆನಡಾ ಒಲಂಪಿಕ್ಸ್ ಟೂರ್ನಿಯಿಂದ ಹಿಂದೆ ಸರಿದ ಮೊದಲ ದೇಶವಾಗಿದೆ. ಮುಂದಿನ ದಿನಗಳಲ್ಲಿ ಇನ್ಯಾವ ದೇಶಗಳು ಹಿಂದೆ ಸರಿಯುತ್ತವೆ ನೋಡ್ಬೇಕು.

ಜುಲೈ 4 ರಿಂದ ಆಗಸ್ಟ್ 9ರ ತನಕ ಒಲಂಪಿಕ್ಸ್ ಟೂರ್ನಿ ಆಯೋಜಿಸಲಾಗಿತ್ತು. ಇದರಲ್ಲಿ 206 ದೇಶಗಳ 11 ಸಾವಿರದ 91 ಕ್ರೀಡಾಪಟುಗಳು ಭಾಗವಹಿಸುವ ನಿರೀಕ್ಷೆಯಿತ್ತು. ಆದ್ರೆ, ಜಗತ್ತಿನಾದ್ಯಂತ 10 ಸಾವಿರಕ್ಕೂ ಹೆಚ್ಚು ಜನರನ್ನ ಕರೋನಾ ಆಹುತಿ ಪಡೆದಿರುವ ಹಿನ್ನೆಲೆಯಲ್ಲಿ ಒಲಂಪಿಕ್ಸ್ ಟೂರ್ನಿಗೂ ಅದರ ಎಫೆಕ್ಟ್ ಆಗಿದೆ. ಹೀಗಾಗಿ ಇದನ್ನ ಮುಂದೂಡುವ ಸಾಧ್ಯತೆ ಹೆಚ್ಚಿದೆ.




Leave a Reply

Your email address will not be published. Required fields are marked *

error: Content is protected !!