ಭರ್ಜರಿ ಸೌಂಡ್ ಮಾಡ್ತಿದೆ ‘ಪಾಣಿಪತ್’ ಕಾಳಗ

488

ಬಾಲಿವುಡ್ ಅಂಗಳದಲ್ಲಿ ಇದೀಗ ಪಾಣಿಪತ್ ಕದನದ ಹವಾ ಜೋರಾಗಿದೆ. ಭಾರತೀಯ ಇತಿಹಾಸದ ಪುಟದಲ್ಲಿ ವಿಭಿನ್ನವಾಗಿ ಗುರುತಿಸಿಕೊಂಡಿರುವ ಪಾಣಿಪತ್ ಕದನ ಚಿತ್ರವಾಗ್ತಿರುವುದು ಸಿನಿ ಪ್ರಿಯರಿಗೆ ಗೊತ್ತಿದೆ. ಇದರ ಟ್ರೇಲರ್ ಭರ್ಜರಿ ಸೌಂಡ್ ಮಾಡ್ತಿದೆ.

ಟ್ರಲರ್ ರಿಲೀಸ್ ಆದ ನಾಲ್ಕೈದು ದಿನಗಳಲ್ಲಿಯೇ 2 ಕೋಟಿ 52 ಲಕ್ಷದ 63 ಸಾವಿರಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ. ಮರಾಠ ವೀರ ಸೇನಾನಿ ಹಾಗೂ ಅಫ್ಘನ್ ದೊರೆಯ ನಡುವಿನ ಕಾಳಗ ಪ್ರತಿ ಪ್ರೇಮ್ ನಲ್ಲಿಯೂ ಕಾಣಿಸ್ತಿದೆ. ನಟ ಅರ್ಜುನ ಕಪೂರ, ಸಂಜಯ ದತ್ತ, ನಟಿ ಕೃತಿ ಸನೋನ್ ಸೇರಿದಂತೆ ಬಹುದೊಡ್ಡ ತಾರಾಬಳಗವಿದೆ. ಅಶುತೋಷ ಗೋವರಿಕರ್ ನಿರ್ದೇಶನದ ಸಿನಿಮಾ ಡಿಸೆಂಬರ್ 6ಕ್ಕೆ ತೆರೆಗೆ ಅಪ್ಪಳಿಸ್ತಿದೆ.




Leave a Reply

Your email address will not be published. Required fields are marked *

error: Content is protected !!