ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ದೇಶದ ತುಂಬಾ ದಿನದಿಂದ ದಿನಕ್ಕೆ ಪೆಟ್ರೋಲ್ ಬೆಲೆ ಏರಿಕೆ ಮಾಡಲಾಗುತ್ತಿದೆ. ಇಂದು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ 80 ಪೈಸೆ ಏರಿಕೆ ಮಾಡಿದ್ದು, ಎರಡು ವಾರದಲ್ಲೇ 8 ರೂಪಾಯಿ ಏರಿಕೆಯಾಗಿದೆ.
ಮಾರ್ಚ್ 22ರ ನಂತರದಿಂದ ತೈಲ ಬೆಲೆ ಏರಿಕೆಯಾಗುತ್ತಲೇ ಹೊರಟಿದೆ. ನಾಲ್ಕುವರೆ ತಿಂಗಳು ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರಿಕೆ ಮಾಡಿರಲಿಲ್ಲ. ಯಾಕಂದರೆ, ಪಂಚರಾಜ್ಯಗಳ ಚುನಾವಣೆ ನಡೆಯುತ್ತಿದ್ದವು. ಅದು ಮುಗಿಯುದಂತೆ ಸಾರ್ವನಿಕರ ಮೇಲೆ ಬರೆ ಎಳೆಯಾಗಿದೆ ಎಂದು ಕಿಡಿ ಕಾರಲಾಗುತ್ತಿದೆ.