ಮನ್ ಕೀ ಬಾತ್: ವಿಶ್ವಕ್ಕೆ ಭಾರತ ಮಾದರಿ

353

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು 64ನೇ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಮಾತ್ನಾಡಿ, ಕರೋನಾ ವಿಚಾರದಲ್ಲಿ ಭಾರತ ಇಡೀ ವಿಶ್ವಕ್ಕೆ ಮಾದರಿಯಾಗಿದೆ ಎಂದು ಹೇಳಿದ್ದಾರೆ. ಭಾರತ ಸರಿಯಾದ ದಾರಿಯಲ್ಲಿ ಹೋಗುತ್ತಿದೆ. ಪ್ರತಿಯೊಬ್ಬರು ಸಮರ್ಥವಾಗಿ ಹೋರಾಡ್ತಿದ್ದಾರೆ ಎಂದು ಹೇಳಿದ್ದಾರೆ.

ಕರೋನಾ ತುರ್ತು ಪರಿಸ್ಥಿತಿಯಲ್ಲಿ ನಮ್ಮ ರೈತರು ಪ್ರತಿಯೊಬ್ಬರ ಹಸಿವನ್ನು ನೀಗಿಸ್ತಿದ್ದಾರೆ. ಕೆಲವರು ಮನೆ ಬಾಡಿಗೆ ತೆಗೆದುಕೊಂಡಿಲ್ಲ. ಕೆಲವರು ಊಟೋಪಚಾರದ ವ್ಯವಸ್ಥೆ ಮಾಡ್ತಿದ್ದಾರೆ. ಹೀಗೆ ಪ್ರತಿಯೊಬ್ಬರು ತಮ್ಮ ಕೈಲಾದ ಸಹಾಯ ಮಾಡ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕರೋನಾ ವಾರಿಯರ್ಸ್ ಪರವಾಗಿ ಸರ್ಕಾರ ಎಲ್ಲ ರೀತಿಯ ಕ್ರಮಗಳನ್ನ ತೆಗೆದುಕೊಂಡಿದೆ. ಕರೋನಾ ವಾರಿಯರ್ಸ್ ಮೇಲೆ ಹಲ್ಲೆ ಮಾಡುವವರ ವಿರುದ್ಧ ಕಠಿಣ ಕ್ರಮಗಳನ್ನ ತೆಗೆದುಕೊಳ್ಳಲಾಗುವುದು. ಅವರ ಜೊತೆ ಕೈಜೋಡಿಸಿ ದೇಶ ಸೇವೆ ಮಾಡಿ ಎಂದರು.

ಅನಗತ್ಯವಾಗಿ ರಸ್ತೆಗೆ ಇಳಿಯಬೇಡಿ. ಅಗತ್ಯ ವಸ್ತುಗಳನ್ನ ಸಮೀಪದ ಅಂಗಡಿಗಳಲ್ಲೇ ಖರಿದೀಸಿ. ಇಡೀ ವಿಶ್ವ ಇಂದು ಭಾರತವ್ನ ಹೊಗಳುತ್ತಿದೆ. ನಮ್ಮಲ್ಲಿನ ಔಷಧಿ ಪೂರೈಕೆ ಮಾಡಲಾಗ್ತಿದೆ. ವಿಶ್ವದ ನಾಯಕರು ಕರೆ ಮಾಡಿ ಶುಭಾಶಯ ತಿಳಿಸ್ತಿದ್ದಾರೆ ಎಂದುರು. ಬಿಸಿ ನೀರು ಸೇವನೆ ಮಾಡಿ. ಯೋಗ ಮತ್ತು ವ್ಯಾಯಾಮ ಮಾಡಿ. ಕರೋನಾವನ್ನ ಗಂಭೀರವಾಗಿ ಪರಿಗಣಿಸಿ ನಿಮ್ಮ ಜೀವದ ಜೊತೆಗೆ ಎಲ್ಲರ ಜೀವ ಉಳಿಸಿ ಎಂದರು. ಇಂದು ಬಸವಣ್ಣನವರ ಜಯಂತಿ. ಎಲ್ಲರಿಗೂ ಬಸವ ಜಯಂತಿಯ ಶುಭಾಶಯಗಳು ಹೇಳಿದ್ರು.




Leave a Reply

Your email address will not be published. Required fields are marked *

error: Content is protected !!