ಶಿವಸೇನೆಗೆ ‘ಪವಾರ್’ಫುಲ್ ಶಾಕ್ ಕೊಟ್ರಾ?

375

ನವದೆಹಲಿ: ಮಹಾರಾಷ್ಟ್ರದ ರಾಜಕೀಯ ಕಚ್ಚಾಟದ ಪರಿಣಾಮ ರಾಷ್ಟ್ರಪತಿ ಆಡಳಿತ ಶುರುವಾಗದೆ. ತನ್ನ ಹಲವು ದಶಕಗಳ ಸ್ನೇಹಿತ ಬಿಜೆಪಿಗೆ ವಿರುದ್ಧ ಬೆಂಕಿ ಉಗುಳುತ್ತಿರುವ ಶಿವಸೇನೆಗೆ ಎನ್ ಸಿಪಿ ನಾಯಕ ಶರದ್ ಪವಾರ ಶಾಕ್ ಕೊಟ್ಟಿದ್ದಾರೆ ಅಂತಾ ಹೇಳಲಾಗ್ತಿದೆ. ಪ್ರಧಾನಿ ಮೋದಿಯನ್ನ ಪವಾರ ಭೇಟಿಯಾಗಿದ್ದಾರೆ.

ಮಾಜಿ ಸಿಎಂ ಶರದ್ ಪವಾರ ದೆಹಲಿಯಲ್ಲಿ ಇಂದು ಪ್ರಧಾನಿಯನ್ನ ಭೇಟಿ ಮಾಡಿರುವುದು ಕುತೂಹಲ ಮೂಡಿಸಿದೆ. ಆದ್ರೆ, ಕೆಲ ಮೂಲಗಳ ಪ್ರಕಾರ ಭಾರೀ ಪ್ರವಾಹದಿಂದ ಸಂಕಷ್ಟ ಎದುರಿಸ್ತಿರುವ ಪ್ರದೇಶಗಳಿಗೆ ವಿಶೇಷ ನೆರವು ಘೋಷಣೆಗೆ ಮನವಿ ಮಾಡಿಕೊಂಡಿದ್ದಾರೆ ಅಂತಾ ಹೇಳಲಾಗ್ತಿದೆ.

ಪ್ರವಾಹದಿಂದಾಗಿ ಮಹಾರಾಷ್ಟ್ರದಲ್ಲಿ ಸಾವಿರಾರು ಕೋಟಿ ನಷ್ಟವಾಗಿದೆ. ಜನರು ಸಂಕಷ್ಟದಲ್ಲಿದ್ದಾರೆ. ಅವರ ಹಿತದೃಷ್ಟಿಯಿಂದ ವಿಶೇಷ ನೆರವು ನೀಡಬೇಕೆಂದು ಮನವರಿಕೆ ಮಾಡಿದ್ದಾರೆ. ಇದಕ್ಕೆ ಪ್ರಧಾನಿ ಮೋದಿ ಭರವಸೆ ನೀಡಿದ್ದಾರೆ ಅಂತಾ ಹೇಳಲಾಗ್ತಿದೆ. ಕೆಲವರು ಇದಕ್ಕೆ ರಾಜಕೀಯ ಕಾರಣವನ್ನ ಸಹ ನೀಡ್ತಿದ್ದಾರೆ.

ಬಿಜೆಪಿ ಜೊತೆಗಿನ ಸಂಬಂಧ ಕಡಿದುಕೊಳ್ಳದ ಹೊರತು ಶಿವಸೇನೆ ಜೊತೆ ಮೈತ್ರಿ ಇಲ್ಲವೆಂದು ಎನ್ ಸಿಪಿ ಮುಖಸ್ಥ ಶರದ್ ಪವಾರ ಹೇಳಿದ್ರು. ಬಿಜೆಪಿಯೊಂದಿಗೆ ಅಧಿಕೃತವಾಗಿ ಮೈತ್ರಿ ಮುರಿದುಕೊಂಡು ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತಿದೆ. ಅಲ್ದೇ, ಯಾರು ಜೊತೆಗೆ ಬರದಿದ್ರೂ ಶಿವಸೇನೆ ಸರ್ಕಾರ ರಚನೆ ಮಾಡುತ್ತೆ ಅಂತಾ ಹೇಳಿದೆ. ಇದರ ನಡುವೆ ಪವಾರ ಪ್ರಧಾನಿ ಭೇಟಿ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಈ ಮೂಲಕ ಶಿವಸೇನೆಗೆ ಎನ್ ಸಿಪಿ ಶಾಕ್ ಕೊಡಲು ಮುಂದಾಗಿದೆಯಾ ಅನ್ನೋ ಪ್ರಶ್ನೆ ಮೂಡಿದೆ.




Leave a Reply

Your email address will not be published. Required fields are marked *

error: Content is protected !!