ಆರೋಗ್ಯ ಸಿಬ್ಬಂದಿಗೆ ಸಿಂದಗಿಯಲ್ಲಿ ರಕ್ಷಾ ಸಲಕರಣೆ ವಿತರಣೆ

605

ಸಿಂದಗಿ: ತಾಲೂಕು ಸಮುದಾಯ ಆರೋಗ್ಯ ಅಧಿಕಾರಿಗಳ ಸಂಘ, ವಿಜಯಪುರ ಜಿಲ್ಲೆಯ ಪದಾಧಿಕಾರಿಗಳಿಂದ ಹಾಗೂ ಇತರೆ ಸಂಸ್ಥೆಗಳಿಂದ ಕರೋನಾ ವಾರಿಯರ್ಸ್ ಗೆ ಪಿಪಿಇ ಕಿಟ್ ಗಳನ್ನ ವಿತರಣೆ ಮಾಡಲಾಗಿದೆ.

ಇನ್ನೋವೇಟಿವ್ ಅಲಾಯನ್ಸ್ ಫಾರ್ ಪಬ್ಲಿಕ್ ಹೆಲ್ತ್ ಮತ್ತು ಸೋಚರ ಬೆಂಗಳೂರು ಸಂಸ್ಥೆ ವತಿಯಿಂದ ಸಹಾಯ ಹಸ್ತವಾಗಿ, ತಾಲೂಕಿನ ಚೆಕ್ ಪೋಸ್ಟ್ ನಲ್ಲಿ ಕಾರ್ಯನಿರತ ಸಮುದಾಯ ಆರೋಗ್ಯ ಅಧಿಕಾರಿಗಳಿಗೆ ವಿತರಿಸಲು ರಕ್ಷಾ ಸಲಕರಣೆಗಳನ್ನ ನೀಡಲಾಗಿದೆ. ತಾಲೂಕು ವೈದ್ಯಾಧಿಕಾರಿ ಡಾ.ಇಂಗಳೆ ಅವರ ಮೂಲಕ ಪಿಪಿಇ ಕಿಟ್ ನೀಡಲಾಗಿದೆ.

4 ಥರ್ಮಲ್ ಸ್ಕ್ಯಾನರ್ ಗಳು, 300 ಮಾಸ್ಕ್, 50 ಮುಖಕವಚ, 300 ಸರ್ಜಿಕಲ್ ಹ್ಯಾಂಡ್ ಗ್ಲೌಸ್ ಗಳನ್ನ ನೀಡಲಾಗಿದೆ. ಈ ವೇಳೆ ಸಂಘದ ಪದಾಧಿಕಾರಿಗಳಾದ ಯಲ್ಲಾಲಿಂಗ ಕಟಕದೊಂಢ, ಬಸವರಾಜ ಶಹಾಪುರ, ರಾಕೇಶ ಹುಗಾರ, ಸಿದ್ಧಲಿಂಗಪ್ಪ ಮುರಾಳ, ಗುರುಶಾಂತ.ಪಿ, ರಮೇಶ ಪರಡ್ಡಿ ಹಾಗೂ ಇನ್ನಿತರ ಸದಸ್ಯರುಗಳು ಉಪಸ್ಥಿತರಿದ್ದರು.




Leave a Reply

Your email address will not be published. Required fields are marked *

error: Content is protected !!