ಸಿಎಂ ಬೆನ್ನಿಗೆ ನಿಂತ ಸಂಘ ಪರಿವಾರ! ಪಕ್ಷ ಬಿಡುವವರಿದ್ದರೆ ಬಿಡಲಿ ಎಂದ ಹೈಕಮಾಂಡ್?

236

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಸಚಿವರಾದ ಆನಂದ್ ಸಿಂಗ್, ಎಂಟಿಬಿ ನಾಗರಾಜ್ ಸೇರಿ ಹಲವು ಅಸಮಾಧಾನಿತ ಸಚಿವರು ಬ್ಲಾಕ್ ಮೇಲ್ ತಂತ್ರಕ್ಕೆ ಮುಂದಾಗಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆನ್ನಿಗೆ ಆರ್ ಎಸ್ಎಸ್ ನಿಂತುಕೊಂಡಿದೆ.

ಅಸಮಾಧಾನಿತರ ವಿಚಾರದಲ್ಲಿ ಹೈಕಮಾಂಡ್ ಹಾಗೂ ಆರ್ ಎಸ್ಎಸ್ ಸೂಚನೆ ನೀಡಿದ್ದು, ರಾಜೀನಾಮೆ ಕೊಟ್ಟರೆ ಅಂಗೀಕರಿಸುವಂತೆ ಹೇಳಿದೆಯಂತೆ. ಈ ಮೂಲಕ ಬ್ಲಾಕ್ ಮೇಲ್ ತಂತ್ರಕ್ಕೆ ಭಯಪಡಬೇಡಿ. ಪಕ್ಷದಲ್ಲಿ ಯಾರೆ ಬ್ಲಾಕ್ ಮೇಲ್ ಮಾಡಿದ್ರು ಅವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮಕ್ಕೆ ಸೂಚನೆ ನೀಡಿದೆಯಂತೆ.

ಕೊಟ್ಟಿರೋ ಖಾತೆ ನಿರ್ವಹಣೆ ಮಾಡಿಕೊಂಡು ಹೋಗುವಂತೆ ಸೂಚಿಸಿ. ಇಲ್ಲವಾದರೆ ನಿಮ್ಮ ದಾರಿ ನೋಡಿಕೊಳ್ಳುವಂತೆ ಹೇಳುವ ಮೂಲಕ ರೆಬಲ್ ಸಚಿವರಿಗೆ ಹೈಕಮಾಂಡ್ ಸೂಚಿಸಿದ್ದು, ಸರ್ಕಾರ ರಚನೆ ಆದಾಗಿನಿಂದ ವಲಸಿಗರ ಪ್ರಾಬಲ್ಯ ಹೆಚ್ಚಾಗಿದೆ. ಈಗ ಒಬ್ಬರ ಖಾತೆ ಬದಲಾಯಿಸಿದ್ರೆ ಮತ್ತೆ ಬೇರೆಯವರು ಇದೆ ದಾರಿ ಹಿಡಿಯುತ್ತಾರೆ. ವ್ಯಕ್ತಿಗಿಂತ ಪಕ್ಷ ಮುಖ್ಯವಾಗಿದ್ದು,ಪಕ್ಷ ಬಿಟ್ಟು ಹೋಗುವವರಿದ್ರೆ ಹೋಗಲಿ. ಯಾರ ಒತ್ತಾಯಕ್ಕೂ ಮಣಿಯದಂತೆ ಸೂಚನೆ ನೀಡಲಾಗಿದೆಯಂತೆ.




Leave a Reply

Your email address will not be published. Required fields are marked *

error: Content is protected !!