ಗಂಗಾಮತಸ್ಥ ಬಂಧುಗಳಿಂದ ಅರ್ಧ ಕೆಜಿ ಬೆಳ್ಳಿಯ ಶಹನಾಯಿ ಉಡುಗೊರೆ

350

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಗ್ರಾಮೀಣ ಭಾಗದಲ್ಲಿ ಇಂದಿಗೂ ಎಲ್ಲ ಸಮಾಜದವರು ಒಂದು ಅನ್ನೋ ಮನೋಭಾವ ಇದೆ. ಹಬ್ಬ ಹರಿದಿನಗಳು ಬಂದ್ರೆ ಎಲ್ಲರೂ ಕೂಡಿಕೊಂಡು ಆಚರಣೆ ಮಾಡುತ್ತಾರೆ. ಈ ಮೂಲಕ ಕೋಮುಸೌಹಾರ್ದತೆಯನ್ನ ಉಳಿಸಿಕೊಂಡು ಬರಲಾಗುತ್ತಿದೆ. ಇದಕ್ಕೆ ಸಾಕ್ಷಿಯಂಬಂತೆ ಮುಸ್ಲಿಂ ಬಂಧುಗಳ ಮೊಹರಂ ಹಬ್ಬದ ಪ್ರಯುಕ್ತ ಗಂಗಾಮತಸ್ಥ ಸಮಾಜದವರು ಭಜಂತ್ರಿ ಸಮುದಾಯದ ವ್ಯಕ್ತಿಗೆ ಅರ್ಧ ಕೆಜಿ ಬೆಳ್ಳಿಯ ಶಹನಾಯಿಯನ್ನ ಪ್ರೀತಿಯಿಂದ ನೀಡಿದ್ದಾರೆ.

ಇಂತಹದೊಂದು ಕೋಮುಸೌಹಾರ್ದಯುತವಾದ ಸಂಗತಿ ನಡೆದಿರುವುದು ತಾಲೂಕಿನ ಯಂಕಂಚಿ ಗ್ರಾಮದಲ್ಲಿ. ಶರಣಪ್ಪ ಭಜಂತ್ರಿ ಅನ್ನೋ ವ್ಯಕ್ತಿಗೆ ಪ್ರೀತಿ ಹಾಗೂ ಗೌರವಿಂದ ಊರಿನ ಜನರು ಕೂಡಿಕೊಂಡು ಅರ್ಧ ಕೆಜಿಯ ಬೆಳ್ಳಿಯ ಶಹನಾಯಿ ನೀಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.




Leave a Reply

Your email address will not be published. Required fields are marked *

error: Content is protected !!