ಗಣರಾಜ್ಯೋತ್ಸವಕ್ಕೆ 12 ರಾಜ್ಯಗಳ ಟ್ಯಾಬ್ಲೋ ಆಯ್ಕೆ.. ಈ ರಾಜ್ಯಗಳು ಔಟ್

384

ನವದೆಹಲಿ: ಜನವರಿ 26ರ ಗಣರಾಜ್ಯೋತ್ಸವದಂದು ರಾಷ್ಟ್ರ ರಾಜಧಾನಿಯಲ್ಲಿ ನಡೆಯುವ ಪರೇಡ್ ನಲ್ಲಿ ಕರ್ನಾಟಕ ಸೇರಿದಂತೆ 12 ರಾಜ್ಯಗಳ ಸ್ತಬ್ಧಚಿತ್ರಗಳು ಆಯ್ಕೆ ಆಗಿವೆ.

ರಾಜ್ಯಗಳು ಹಾಗೂ ಕೇಂದ್ರಾಡಳಿತದಿಂದ ಸಲ್ಲಿಕೆಯಾಗಿದ್ದ ಟ್ಯಾಬ್ಲೋಗಳ ಪ್ರಸ್ತಾವನೆಯಲ್ಲಿ ಆಯ್ಕೆ ಸಮಿತಿ ಕರ್ನಾಟಕ ಸೇರಿ 12 ರಾಜ್ಯಗಳ ಪ್ರಸ್ತಾವನೆಯನ್ನ ಸ್ವೀಕರಿಸಿದೆ. ಸಂವಿಧಾನಕ್ಕೆ 70 ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ, ಪ್ರಜಾಪ್ರಭುತ್ವ ವ್ಯವಸ್ಥೆಗೆ 12ನೇ ಶತಮಾನದಲ್ಲಿ ಅಣ್ಣ ಬಸವಣ್ಣ ನಿರ್ಮಿಸಿದ್ದ ಅನುಭವ ಮಂಟಪ ಮಾದರಿಯಾಗಿರುವುದ್ರಿಂದ ಕರ್ನಾಟಕದಿಂದ ಅನುಭವ ಮಂಟಪ ಸ್ತಬ್ಧಚಿತ್ರ ಪಥಸಂಚಲನದಲ್ಲಿ ಕಾಣಿಸಿಕೊಳ್ಳಲಿದೆ.

ಮಹಾರಾಷ್ಟ್ರ, ಬಿಹಾರ, ಪಶ್ವಿಮ ಬಂಗಾಳ, ಕೇರಳ ಸೇರಿದಂತೆ ಹಲವು ರಾಜ್ಯಗಳ ಪ್ರಸ್ತಾವನೆಯನ್ನ ತಿರಸ್ಕರಿಸಲಾಗಿದೆ. ಇದೊಂದು ರಾಜಕೀಯ ಪ್ರೇರಿತವೆಂದು ಕೇರಳ ಸರ್ಕಾರ ಖಂಡಿಸಿದೆ.




Leave a Reply

Your email address will not be published. Required fields are marked *

error: Content is protected !!