ರಿಲೀಸ್ ಗೂ ಮೊದ್ಲೇ ಬಾಹುಬಲಿ ದಾಖಲೆ ಮುರಿದ RRR ಮೂವಿ

403

ಇಂಡಿಯನ್ ಸಿನಿ ದುನಿಯಾದಲ್ಲಿ ಬ್ಲಾಕ್ ಬ್ಲಸ್ಟರ್ ಮೂವಿ ಅಂದ್ರೆ ಬಾಹುಬಲಿ-2. ಇದರ ದಾಖಲೆಯನ್ನ ಬ್ರೇಕ್ ಮಾಡೋದು ಅಷ್ಟೊಂದು ಈಸಿ ಅಲ್ಲ. ಆದ್ರೆ, ಇಂಥಾ ಸೂಪರ್ ಹಿಟ್ ಮೂವಿ ನೀಡಿದ್ದ ನಿರ್ದೇಶಕ ರಾಜಮೌಳಿಯ ಮತ್ತೊಂದು ಮೂವಿ ಆ ದಾಖಲೆಯನ್ನ ಬ್ರೇಕ್ ಮಾಡ್ತಿದೆ.

ನಟ ರಾಮಚರಣ ತೇಜ, ಜ್ಯೂನಿಯರ್ ಆನ್ ಟಿಆರ್, ಅಜೇಯ ದೇವಗನ್ ಹಾಗೂ ನಟಿ ಆಲಿಯಾ ಭಟ್ ನಟನೆಯ RRR ಮೂವಿ ರಿಲೀಸ್ ಗೂ ಮೊದ್ಲೇ ದಾಖಲೆ ಮಾಡಿದೆ. ಜನವರಿ 8, 2021ಕ್ಕೆ ರಿಲೀಸ್ ಆಗ್ತಿರುವ ಈ ಚಿತ್ರ ಕರ್ನಾಟಕದಲ್ಲಿ ಬರೋಬ್ಬರಿ 50 ಕೋಟಿಗೆ ಮಾರಾಟವಾಗಿದೆ. ಕೇರಳದಲ್ಲಿ 15 ಕೋಟಿ, ವಿದೇಶಗಳಲ್ಲಿ 70 ಕೋಟಿಗೆ ಮಾರಾಟವಾಗಿದೆ. ಇನ್ನು ತಮಿಳುನಾಡು, ಉತ್ತರ ಭಾರತದಲ್ಲಿಯೂ ಭರ್ಜರಿಯಾಗಿ ಸೇಲ್ ಆಗ್ತಿದ್ದು, ರಿಲೀಸ್ ಗೂ ಮೊದ್ಲೇ 400 ಕೋಟಿ ಗಳಿಕೆ ಮಾಡಿದೆಯಂತೆ.




Leave a Reply

Your email address will not be published. Required fields are marked *

error: Content is protected !!