ಮದುವೆ ನಂತರವೂ ಹಳೆ ಲವರ್ ಜೊತೆ ಜೊತೆಯಲಿ.. ಮಗಳ ಬದುಕಿಗೆ ತಂದೆಯಿಟ್ಟ ಫುಲ್ ಸ್ಟಾಪ್

467

ಬಳ್ಳಾರಿ: ಮದುವೆ ಮಾಡಿಕೊಂಡ್ಮೇಲೂ ಹಳೆ ಲವರ್ ಜೊತೆ ಸುತ್ತಾಡಿಕೊಂಡಿದ್ದ ಮಗಳನ್ನ ತಂದೆಯೇ ಕೊಲೆ ಮಾಡಿರುವ ಘಟನೆ ನಡೆದಿದೆ. 23 ವರ್ಷದ ಕವಿತಾ ಕೊಲೆಯಾದ ದುರ್ದೈವಿ ಮಗಳು. ಮಗಳನ್ನ ಕೊಲೆ ಮಾಡಿದ ತಂದೆ ಬಳಿಕ ಪೊಲೀಸ್ರಿಗೆ ಬಂದು ಶರಣಾಗಿದ್ದಾನೆ.

ಕವಿತಾ 18 ವರ್ಷದವಳಿರುವಾಗ ಯುವಕನೊಂದಿಗೆ ಸುತ್ತಾಡ್ತಿದ್ದಳಂತೆ. ಹೀಗಾಗಿ ಹೆತ್ತವರು 4 ವರ್ಷಗಳ ಹಿಂದೆ ಮದುವೆ ಮಾಡಿದ್ದಾರೆ. ಈ ದಂಪತಿಗೆ ಇದೀಗ 6 ತಿಂಗಳು ಮಗುವಿದೆ. ಹೀಗಿದ್ರೂ ಕವಿತಾ ತನ್ನ ಹಳೆ ಲವರ್ ಜೊತೆ ಸುತ್ತಾಟ ನಡೆಸಿದ್ದಾಳಂತೆ. ಅಲ್ದೇ, ಒಮ್ಮೆ ಗಂಡನ ಮನೆಯಿಂದ ಓಡಿ ಹೋಗಿ ಪ್ರಿಯತಮನ ಜೊತೆ ಹೋಗಿದ್ದಳಂತೆ. ಬಳಿಕ ಕುಟುಂಬಸ್ಥರು ಬುದ್ದಿವಾದ ಹೇಳಿ ಕಳುಹಿಸಿದ್ರು.

ಇಷ್ಟೆಲ್ಲ ಆದ್ಮೇಲೆ ಹುಡ್ಗ ಕವಿತಾಳನ್ನ ಹುಡುಕಿಕೊಂಡು ಅವಳಿದ್ದ ಮನೆ ಹತ್ತಿರ ಬರ್ತಿದ್ದನಂತೆ. ಇದ್ರಿಂದ ಬೇಸತ್ತ ತಂದೆ, ಮಗಳ ತಪ್ಪನ್ನು ಎಷ್ಟೆಂದು ಸಹಿಸಲು ಸಾಧ್ಯ. ಹೀಗಾಗಿ ನಾನೇ ಕತ್ತು ಹಿಸುಕಿ ಕೊಲೆ ಮಾಡಿದ್ದೇನೆ ಅಂತಾ ಹೇಳಿದ್ದಾನೆ. ಇದನ್ನ ಒಬ್ಬನೆ ಮಾಡಿದ್ದಾನ ಅಥವ ಮನೆಯವರೆಲ್ಲ ಸೇರಿಕೊಂಡು ಕೊಲೆ ಮಾಡಿದ್ದಾರ ಅನ್ನೋ ಅನುಮಾನ ವ್ಯಕ್ತವಾಗಿದೆ. ಈ ಬಗ್ಗೆ ಪರಮದೇವನಹಳ್ಳಿಯಲ್ಲಿ ಪ್ರಕರಣ ದಾಖಲಾಗಿದೆ.




Leave a Reply

Your email address will not be published. Required fields are marked *

error: Content is protected !!