‘ರುಸ್ತುಂ’ ಫಸ್ಟ್ ಡೇ ಫಸ್ಟ್ ಶೋ ಮಾತು…

445

ಸೆಂಚುರಿ ಸ್ಟಾರ್ ಶಿವರಾಜಕುಮಾರ ಅಭಿನಯದ ರುಸ್ತುಂ ಮೂವಿ ರಿಲೀಸ್ ಆಗಿದ್ದು, ಫಸ್ಟ್ ಡೇ ಫಸ್ಟ್ ಶೋ ನೋಡಿದ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಶಿವಣ್ಣ ತುಂಬಾ ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದು ಅವರ ಅಭಿಮಾನಿಗಳಿಗೆ ಇಷ್ಟವಾಗಿದೆ.

ಗ್ಯಾಂಗ್ ಸ್ಟರ್ ಕಥಾಹಂದರವಿರುವ ಸಿನಿಮಾ ಪಕ್ಕಾ ಔಟ್ ಆ್ಯಂಡ್ ಔಟ್ ಆಕ್ಷನ್ ಥ್ರಿಲ್ಲರ್ ಮೂವಿಯಾಗಿದೆ. ಸಾಹಸ ನಿರ್ದೇಶಕ ರವಿ ವರ್ಮ ನಿರ್ದೇಶನದ ಮೊದಲ ಸಿನಿಮಾಗೆ ಸಿನಿ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚೂಪು ಮೀಸೆ ಬಿಟ್ಟುಕೊಂಡಿರುವ ಪೊಲೀಸ್ ಅಧಿಕಾರಿಯ ಪಾತ್ರ ಮಾಡಿರುವ ಶಿವಣ್ಣನಿಗೆ ಇದು ಅವರ ಕರಿಯರ್ ನ ಡಿಫರೆಂಟ್ ಚಿತ್ರವಾಗುತ್ತೆ ಅಂತಿದ್ದಾರೆ.

ಎರಡು ಶೇಡ್ ಪಾತ್ರಗಳಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ ಡಿಫರೆಂಟ್ ಆಗಿ ಕಾಣಿಸಿಕೊಂಡಿದ್ದಾರಂತೆ. ಅರೆಸ್ಟ್ ಅಂದ್ರೆ ಅಲರ್ಜಿ.. ಎನ್ ಕೌಂಟರ್ ಅಂದ್ರೆ ಎನರ್ಜಿ.. ಅನ್ನೋ ಡೈಲಾಗ್ ಗೆ ಶಿವಣ್ಣನ ಫ್ಯಾನ್ಸ್ ಬೋಲ್ಡ್ ಆಗಿದ್ದಾರಂತೆ.

ಅನೂಪ ಸೀಳಿನ ಸಂಗೀತ, ಮಹೇನ ಸಿಂಹ ಸಿನಿಮಾಟೋಗ್ರಫಿ ಸೇರಿದಂತೆ ಚಿತ್ರ ತಂಡದ ಕೆಲಸ ಭರ್ಜರಿಯಾಗಿ ವರ್ಕೌಟ್ ಆಗಿದೆ ಎನ್ನಲಾಗ್ತಿದೆ. ಆಕ್ಷನ್ ಥ್ರಿಲ್ಲರ್ ಪ್ರಿಯರಿಗೆ ರುಸ್ತುಂ ಮೂವಿ ಹೇಳಿ ಮಾಡಿಸಿದಂತಿದೆ ಅನ್ನೋದು ಸಿನಿಮಾ ನೋಡಿದ ಪ್ರೇಕ್ಷಕರ ಅಭಿಪ್ರಾಯ.

ಇನ್ನು ಶಿವಣ್ಣನಿಗೆ ಬಾಲಿವುಡ್ ನಟ ವಿವೇಕ ಒಬೆರಾಯ್, ನಟಿ ಶ್ರದ್ಧಾ ಶ್ರೀನಾಥ, ಮಯೂರಿ, ರಚಿತಾ ರಾಮ ಹಾಗೂ ಹರೀಶ ಉತ್ತಮನ್ ಅವರು ಸಾಥ್ ನೀಡಿದ್ದಾರೆ.


TAG


Leave a Reply

Your email address will not be published. Required fields are marked *

error: Content is protected !!