ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಬಾಲಿವುಡ್ ಹಿರಿಯ ನಟ ಸಂಜಯ ದತ್ತಗೆ ಕಳೆದ ರಾತ್ರಿ ಎದೆನೋವು ಹಾಗೂ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ಹೀಗಾಗಿ ಅವರನ್ನ ತಕ್ಷಣ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೋವಿಡ್ 19 ಟೆಸ್ಟ್ ಮಾಡಿಸಲಾಗಿದ್ದು, ನೆಗಟಿವ್ ಬಂದಿದೆ. ಈ ಬಗ್ಗೆ ನಟ ಸಂಜಯ ದತ್ತ ಟ್ವೀಟ್ ಮಾಡಿದ್ದಾರೆ.
ನಾನು ಚೆನ್ನಾಗಿದ್ದೇನೆ. ಚಿಕಿತ್ಸಾ ನಿಗಾದಲ್ಲಿದ್ದು, ಕೋವಿಡ್ 19 ನೆಗಟಿವ್ ಬಂದಿದೆ. ಲೀಲಾವತಿ ಆಸ್ಪತ್ರೆಯ ವೈದ್ಯರು, ನರ್ಸ್, ಸಿಬ್ಬಂದಿ ಚೆನ್ನಾಗಿ ನೋಡಿಕೊಳ್ಳುತ್ತಿದ್ದು, ಒಂದೆರಡು ದಿನಗಳಲ್ಲಿ ನಾನು ಡಿಸ್ಚಾರ್ಜ್ ಆಗುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ಸಂಜಯ ದತ್ತಗೆ ಚಿಕಿತ್ಸೆ ನೀಡ್ತಿರುವ ವೈದ್ಯರು ಹೇಳುವ ಪ್ರಕಾರ, ಇನ್ನು ಕೆಲವೊಂದಿಷ್ಟು ಪರೀಕ್ಷೆಗಳಿದ್ದು, ಅವುಗಳನ್ನ ಮಾಡಲಾಗುತ್ತೆ. ಸಧ್ಯಕ್ಕೆ ಅವರು ಆರೋಗ್ಯವಾಗಿದ್ದಾರೆ. ಯಾವುದೇ ತೊಂದರೆಯಿಲ್ಲವೆಂದು ತಿಳಿಸಿದ್ದಾರೆ. ಜುಲೈ 29ರಂದು ತಮ್ಮ 61ನೇ ವರ್ಷದ ಹುಟ್ಟು ಹಬ್ಬವನ್ನ ಆಚರಿಸಿಕೊಂಡಿದ್ದಾರೆ.