ದುಬೈನಲ್ಲಿ ಎರಡು ದಿನ ಸೈಮಾ ಸಂಭ್ರಮ

182

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಸೌಥ್ ಇಂಡಿಯನ್ ಇಂಟರ್ ನ್ಯಾಷನಲ್ ಮೂವಿ ಅವಾರ್ಡ್ಸ್ ಕಾರ್ಯಕ್ರಮ ಸೆಪ್ಟೆಂಬರ್ 15 ಹಾಗೂ 16ರಂದು ಎರಡು ದಿನಗಳ ದುಬೈನಲ್ಲಿ ಅದ್ಧೂರಿಯಾಗಿ ನಡೆಯಲಿದೆ. ದಕ್ಷಿಣ ಭಾರತ ಚಿತ್ರರಂಗದ ಸ್ಟಾರ್ ಗಳು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಸೈಮಾ 2023ರ ಪ್ರಶಸ್ತಿ ಸಮಾರಂಭದಲ್ಲಿ ಮಿಂಚಲು ಸಿನಿ ತಾರೆಯರು ಫ್ಲೈಟ್ ಏರಿದ್ದಾರೆ. ಡ್ಯಾನ್ಸ್, ಹಾಡು, ಹಾಸ್ಯ, ಹರಟೆ ಸೇರಿದಂತೆ ಅದ್ಧೂರಿ ಕಾರ್ಯಕ್ರಮ ನಡೆಯಲಿದೆ. ಕನ್ನಡದಿಂದ ಯಾವೆಲ್ಲ ಚಿತ್ರ, ನಟ, ನಟಿಯರು ನಾಮಿನೇಷನ್ ಆಗಿದ್ದಾರೆ ಅನ್ನೋದರ ಮಾಹಿತಿ ಇಲ್ಲಿದೆ.

ಅತ್ಯುತ್ತಮ ಚಿತ್ರ ವಿಭಾಗದಲ್ಲಿ: ಕಾಂತಾರ, ಕೆಜಿಎಫ್-2, ಲವ್ ಮಾಕ್ ಟೇಲ್-2, 777 ಚಾರ್ಲಿ, ವಿಕ್ರಾಂತ್ ರೋಣ

ಅತ್ಯುತ್ತಮ ನಟ ವಿಭಾಗ: ದಿ.ಪುನೀತ್ ರಾಜಕುಮಾರ್(ಜೇಮ್ಸ್), ರಕ್ಷಿಶ್ ಶೆಟ್ಟಿ(777 ಚಾರ್ಲಿ), ರಿಷಬ್ ಶೆಟ್ಟಿ(ಕಾಂತಾರ), ಶಿವರಾಜಕುಮಾರ್(ವೇದ), ಸುದೀಪ್(ವಿಕ್ರಾಂತ್ ರೋಣ), ಯಶ್(ಕೆಜಿಎಫ್-2)

ಅತ್ಯುತ್ತಮ ನಟಿ ವಿಭಾಗ: ಚೈತ್ರಾ ಆಚಾರ(ಗಿಲ್ಕಿ), ಆಶಿಕಾ ರಂಗನಾಥ್(ರೇಮೋ), ರಚಿತಾ ರಾಮ್(ಮನ್ಸೂನ್ ರಾಗ), ಸಪ್ತಮಿಗೌಡ(ಕಾಂತಾರ), ಶರ್ಮಿಳಾ ಮಾಂಡ್ರೆ(ಗಾಳಿಪಟ-2), ಶ್ರೀನಿಧಿ ಶೆಟ್ಟಿ(ಕೆಜಿಎಫ್-2)

ಅತ್ಯುತ್ತಮ ನಿರ್ದೇಶಕ: ಅನೂಪ್ ಭಂಡಾರಿ(ವಿಕ್ರಾಂತ್ ರೋಣ), ಡಾರ್ಲಿಂಗ್ ಕೃಷ್ಣ(ಲವ್ ಮಾಕ್ ಟೇಲ್-2), ಪ್ರಶಾಂತ್ ನೀಲ್(ಕೆಜಿಎಫ್-2), ಕಿರಣರಾಜ್.ಕೆ(777 ಚಾರ್ಲಿ), ರಿಷಬ್ ಶೆಟ್ಟಿ(ಕಾಂತಾರ)

ಅತ್ಯುತ್ತಮ ಸಂಗೀತ ನಿರ್ದೇಶಕ: ಅಜನೀಶ್ ಲೋಕನಾಥ್(ಕಾಂತಾರ), ಅರ್ಜುನ್ ಜನ್ಯ(ಏಕ್ ಲವ್ ಯಾ), ರವಿ ಬ್ರಸೂರ್(ಕೆಜಿಎಫ್-2), ನೋಬಿನ್ ಪಾಲ್(777 ಚಾರ್ಲಿ), ನಕುಲ್ ಅಭಯಂಕರ್(ಲವ್ ಮಾಕ್ ಟೇಲ್-2)

ಪೋಷಕ ನಟ ವಿಭಾಗ: ಕಿಶೋರ್(ಕಾಂತಾರ), ದಿಗಂತ್ ಮಂಚಾಲೆ(ಗಾಳಿಪಟ-2), ಅಚ್ಯುತ್ ಕುಮಾರ್(ಕೆಜಿಎಫ್-2), ರಂಗಾಯಣ ರಘು(ಜೇಮ್ಸ್), ರಾಜ್.ಬಿ ಶೆಟ್ಟಿ(777 ಚಾರ್ಲಿ)

ಪೋಷಕ ನಟಿ ವಿಭಾಗ: ಕಾರುಣ್ಯ ರಾಮ್(ಪೆಟ್ರೋಮ್ಯಾಕ್ಸ್), ಶರ್ಮಿತಾಗೌಡ(ಫ್ಯಾಮಿಲಿ ಪ್ಯಾಕ್), ಶುಭರಕ್ಷಾ(ಹೋಮ್ ಮಿನಿಸ್ಟರ್), ಸಾಕ್ಷಿ ಮೇಘನಾ(ಲಿಸಾ) ಅದಿತಿ ಸಾಗರ(ವೇದ)

ಕಾಂತಾರ, ಕೆಜಿಎಫ್-2, 777 ಚಾರ್ಲಿ, ಲವ್ ಮ್ಯಾಕ್ ಟೇಲ್-2, ವಿಕ್ರಾಂತ್ ರೋಣ ಚಿತ್ರಗಳಿಂದ ಅನೇಕ ವಿಭಾಗಗಳಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಹೊಸಬರ ಒಂದೇ ಒಂದು ಚಿತ್ರ ನಾಮಿನೇಷನ್ ನಲ್ಲಿ ಕಾಣಿಸಿಕೊಂಡಿಲ್ಲ.




Leave a Reply

Your email address will not be published. Required fields are marked *

error: Content is protected !!