ಸಿಂದಗಿ ವಾರ್ಡ್ ವಾರ್: ಇಂದಿನಿಂದ ನಾಮಪತ್ರ ಸಲ್ಲಿಕೆ ಶುರು

482

ಸಿಂದಗಿ: ಪಟ್ಟಣದ ಪುರಸಭೆ ವ್ಯಾಪ್ತಿಯ 23 ವಾರ್ಡ್ ಗಳಿಗೆ ಚುನಾವಣೆ ಘೋಷಣೆಯಾಗಿದ್ದು, ಇಂದಿನಿಂದ ನಾಮಪತ್ರಿಕೆ ಸಲ್ಲಿಕೆ ಪ್ರಾರಂಭವಾಗಿದೆ. ತಹಶೀಲ್ದಾರ್ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ. ವಾರ್ಡ್ 1 ರಿಂದ 11ರ ತನಕ ತಹಶೀಲ್ದಾರ್ ಅವರು ನೋಡಿಕೊಳ್ತಿದ್ದಾರೆ. ವಾರ್ಡ್ 12 ರಿಂದ 23ರ ವರೆಗಿನ ವಾರ್ಡ್ ನ್ನ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಗೋಳಿಮಠ ಅವರು ತೆಗೆದುಕೊಳ್ತಿದ್ದಾರೆ.

ವಾರ್ಡ್ 1ರಿಂದ 11ರವರೆಗಿನ ನಾಮಪತ್ರಗಳನ್ನ ತಹಶೀಲ್ದಾರ್ ಅವರ ಮೀಟಿಂಗ್ ಹಾಲ್ ನಲ್ಲಿ ಸ್ವೀಕರಿಸಲಾಗ್ತಿದೆ. 12 ರಿಂದ 23ರ ವಾರ್ಡ್ ನ ನಾಮಪತ್ರಗಳನ್ನ ಕಂದಾಯ ವಿಭಾಗದ ಪಕ್ಕದ ರೂಮಿನಲ್ಲಿ ಸ್ವೀಕರಿಸಲಾಗ್ತಿದೆ. ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆ ತನಕ ನಾಮಪತ್ರ ಸಲ್ಲಿಕೆಗೆ ಸಮಯ ನಿಗದಿ ಮಾಡಲಾಗಿದೆ. ಜನವರಿ 28 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ.

ಹಿಂದಿನ ಸದಸ್ಯರ ಅವಧಿ ಮುಗಿದು 11 ತಿಂಗಳ ಬಳಿಕ ಎಲೆಕ್ಷನ್ ನಡೆಯುತ್ತಿದೆ. ಹೀಗಾಗಿ ಲೋಕಲ್ ಫೈಟ್ ಭರ್ಜರಿಯಾಗಿ ನಡೆಯುವ ಸಾಧ್ಯತೆಯಿದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಮೊದಲ ಬಾರಿಗೆ ಎಂಟ್ರಿಯಾಗಿರುವ ಬಿಎಸ್ಪಿ ಹಾಗೂ ಪಕ್ಷೇತರ ಅಭ್ಯರ್ಥಿಗಳ ನಡುವೆ ಜಿದ್ದಾಜಿದ್ದಿ ನಡೆಯಲಿದೆ.




Leave a Reply

Your email address will not be published. Required fields are marked *

error: Content is protected !!