‘ಮಹಿಳೆಯರು ಉದ್ಯಮಿಯಾಗಬೇಕು’

287

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಮಹಿಳೆಯರು ಕೆಲಸ ಬರೀ ಹುಡುಕದೆ ಸೃಷ್ಟಿಸಿಕೊಳ್ಳುವ ಮನೋಭಾವದವರಾಗಬೇಕು. ಎಲ್ಲರೂ ಸರ್ಕಾರಿ ಕೆಲಸವನ್ನು ನಂಬಿಕೊಂಡು ಕೂರುವ ಬದಲು ಕೌಶಲ್ಯದ ಮೂಲಕ ಸ್ವತಃ ಉದ್ಯಮಿಯಾಗಬೇಕು ಎಂದು ಹೆಚ್.ಜಿ ಪಿಯು ಕಾಲೇಜು ಪ್ರಾಚಾರ್ಯ ಎ.ಆರ್ ಹೆಗ್ಗನದೊಡ್ಡಿ ಹೇಳಿದರು.

ಪಟ್ಟಣದ ಶ್ರೀ ಪದ್ಮರಾಜ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಸಂಸ್ಥೆಯ ಆಡಳಿತಾಧಿಕಾರಿ ಡಾ.ಬಿ.ಜಿ ಮಠ ಮಾತನಾಡಿ, ಈ ಸಂಸ್ಥೆ ನೀಡುವ ಎಲ್ಲ ಸೌಲಭ್ಯಗಳನ್ನು ವಿದ್ಯಾರ್ಥಿನಿಯರು ಬಳಸಿಕೊಂಡು ಸ್ವ ಉದ್ಯೋಗ ಮಾಡಬೇಕು ಎಂದರು.

ಕಾಲೇಜಿನ ಪ್ರಾಚಾರ್ಯ ಎಸ್.ಎಂ ಪೂಜಾರಿ ಅಧ್ಯಕ್ಷೀಯ ಮಾತುಗಳನ್ನಾಡಿದ್ದರು. ಸಾರಂಗಮಠದ ಪ್ರಭುಸಾರಂಗದೇವ ಶಿವಾಚಾರ್ಯರು ಆಶೀರ್ವಚನ ನೀಡಿದರು. ಈ ವೇಳೆ ನಿವೃತ್ತ ಪ್ರಾಚಾರ್ಯ ಎಂ.ವಿ ಗಣಾಚಾರಿ, ಉಪನ್ಯಾಸಕರಾದ ಮಹಾಂತೇಶ ನೂಲಾನವರ, ಜಿ.ಎ ನಂದಿಮಠ, ಜಿ.ಎಸ್ ಕುಲಕರ್ಣಿ, ಅನೀಲಕುಮಾರ ರಜಪೂತ, ಶ್ರೀದೇವಿ ದುದ್ದಗಿ, ಮಂಗಳಾ ಈಳಗೇರ, ಪಿ.ಎಂ ಮಾಲಿಪಾಟೀಲ, ಶಂಕರ ಕುಂಬಾರ, ವಿಜಯಲಕ್ಷ್ಮಿ ಭಜಂತ್ರಿ, ಹೇಮಾ ಕಾಸರ, ಎಂ.ಕೆ ಬಿರಾದಾರ, ಎಲ್.ಎಂ ಮಾರ್ಸನಳ್ಳಿ, ಜಿ.ವಿ ಪಾಟೀಲ, ಬಸಮ್ಮ ಧರಿ, ಸತೀಶ ಕಕ್ಕಸಗೇರಿ, ಎಸ್.ಎಂ ಹೂಗಾರ ಸೇರಿ ಅನೇಕರು ಉಪಸ್ಥಿತರಿದ್ದರು.

ಜಿ.ಎ ನಂದಿಮಠ ಸ್ವಾಗತಿಸಿದರು. ವಿದ್ಯಾರ್ಥಿನಿ ವಿದ್ಯಾಶ್ರೀ ರುಕುಂಪೂರ ಪ್ರಾರ್ಥಿಸಿದರು. ವಿದ್ಯಾರ್ಥಿ ಸಂಘದ ಕಾರ್ಯಧ್ಯಕ್ಷೆ ಶ್ರುತಿ ಹೂಗಾರ ವರದಿ ವಾಚಿಸಿದರು. ಪೂಜಾ ಸಾರಂಗಮಠ ಹಾಗೂ ನಾಗಮ್ಮ ದೊಡಮನಿ ನಿರೂಪಿಸಿದರು. ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ವಿದ್ಯಾಶ್ರೀ ನಿಗಡಿ ವಂದಿಸಿದರು.




Leave a Reply

Your email address will not be published. Required fields are marked *

error: Content is protected !!