ವಾರ್ನರ್ ಪಡೆಗೆ ಶಾಕ್ ಕೊಟ್ಟ ತೇವಾಟಿಯಾ-ಪರಾಗ್

267

ಪ್ರಜಾಸ್ತ್ರ ಕ್ರೀಡಾ ಸುದ್ದಿ

ದುಬೈ ಇಂಟರ್ ನ್ಯಾಷನ್ ಸ್ಟೇಡಿಯಂನಲ್ಲಿ ಸನ್ ರೈಜರ್ಸ್ ಹೈದ್ರಾಬಾದ್ ಹಾಗೂ ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯದಲ್ಲಿ ಆರ್ ಆರ್ ಟೀಂ ಭರ್ಜರಿಯಾಗಿ ಗೆಲುವು ದಾಖಲಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಎಸ್ಆರ್ ಎಚ್, ಕ್ಯಾಪ್ಟನ್ ಡೇವಿಡ್ ವಾರ್ನರ್ 48, ಬ್ರಿಸ್ಟೋ 16, ಮನೀಷ ಪಾಂಡ್ಯ 54, ಕೇನ್ ವಿಲಿಯಮ್ಸನ್ 22, ಪ್ರಿಯಾಮ್ ಗರ್ಗ್ 15 ಬಾರಿಸಿದ್ರು. 20 ಓವರ್ ಗಳ ಅಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 158 ರನ್ ಬಾರಿಸಿ 159 ರನ್ ಗಳ ಟಾರ್ಗೆಟ್ ನೀಡಲಾಯ್ತು.

ವಾರ್ನರ್ ಟೀಂ ನೀಡಿದ ಟಾರ್ಗೆಟ್ ಚೇಸ್ ಮಾಡಿದ ಸ್ಮಿತ್ ಪಡೆ, ಬೆನ್ ಸ್ಟೋಕ್ 5, ಬಟ್ಲರ್ 16, ಕ್ಯಾಪ್ಟನ್ ಸ್ಮಿತ್ 5, ಸಂಜು ಸ್ಯಾಮ್ಸನ್ 26, ರಾಬಿನ್ ಉತ್ತಪ್ಪ 18 ರನ್ ಬಾರಿಸಿ ಔಟ್ ಆದ್ರು. ಪರಾಗ್ ಹಾಗೂ ತೇವಾಟಿಯಾ ಜೋಡಿ ಭರ್ಜರಿಯಾಗಿ ಆಟವಾಡುವ ಮೂಲಕ ಹೆದ್ರಾಬಾದ್ ಹೊಸ್ತಿಲ ಬಳಿ ನಿಂತಿದ್ದ ಗೆಲುವನ್ನ ಕಸೆದುಕೊಂಡರು.

ರಾಹುಲ ತೇವಾಟಿಯ 28 ಬೌಲ್ ಗೆ 45 ಹಾಗೂ ಪರಾಗ್ 26 ಬೌಲ್ ಗೆ 42 ರನ್ ಬಾರಿಸಿ 163 ರನ್ ಗಳಿಸಿ 5 ವಿಕೆಟ್ ಅಂತರದಿಂದ ಗೆಲುವು ದಾಖಲಿಸಿತು.




Leave a Reply

Your email address will not be published. Required fields are marked *

error: Content is protected !!