ಚಂದನದಲ್ಲಿ ಇಂದಿನಿಂದ ಆಂಗ್ಲ ಮಾಧ್ಯಮದಲ್ಲೂ ಪಾಠ

340

ಬೆಂಗಳೂರು: ಕಳೆದ ಏಪ್ರಿಲ್ 29ರಿಂದ ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳಿಗೆ ಪುನರ್ ಮನನ ಪಾಠ ಭೋದನೆ ಪ್ರಾರಂಭಿಸಲಾಗಿದೆ. ಮಧ್ಯಾಹ್ನ 3 ರಿಂದ 4.30ರ ತನಕ ನಡೆಸಲಾಗ್ತಿದೆ. ಇದೀಗ ಅದರ ಮುಂದುವರೆದ ಭಾಗವಾಗಿ ಇಂಗ್ಲಿಷ್ ಮೀಡಿಯಂ ಮಕ್ಕಳಿಗೂ ಬೋಧನೆ ಶುರುವಾಗಲಿದೆ.

ಬೆಳಗ್ಗೆ 9.30ರಿಂದ 11 ಗಂಟೆಯ ತನಕ ಒಂದು ತಿಂಗಳ ಕಾಲ ತರಗತಿಗಳು ನಡೆಯಲಿವೆ. ಮೊದಲು 15 ದಿನ ಗಣಿತ ಮತ್ತು ವಿಜ್ಞಾನ, ಮುಂದಿನ 10 ದಿನಗಳಲ್ಲಿ ಸಮಾಜ ವಿಜ್ಞಾನ ಕ್ಲಾಸ್ ಗಳು ನಡೆಯಲಿವೆ. ಬಳಿಕ 6 ದಿನಗಳ ಕಾಲ ಹಿಂದಿ, ಸಂಸ್ಕೃತ, ಉರ್ದು ಭಾಷೆಗಳ ತರಗತಿ ನಡೆಯಲಿವೆ. ಕನ್ನಡ ಮಾಧ್ಯಮ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದೆ. ಇದೀಗ ಇಂಗ್ಲಿಷ್ ಮೀಡಿಯಂ ವಿದ್ಯಾರ್ಥಿಗಳಿಗಾಗಿ ಇದನ್ನ ಶುರು ಮಾಡಿದ್ದೇವೆ ಎಂದು ಪ್ರೌಢ ಶಿಕ್ಷಣ ಸಚಿವ ಸುರೇಶಕುಮಾರ ಹೇಳಿದ್ದಾರೆ.

ಬೆಳಗ್ಗೆ 9.30 ರಿಂದ 11 ಗಂಟೆಯ ತನಕ ಚಂದನದಲ್ಲಿ ತರಗತಿಗಳು ನಡೆಯಲಿವೆ. ಇದರ ರೆಕಾರ್ಡಿಂಗ್ ಕ್ಲಾಸ್ ಗಳನ್ನ ಮಕ್ಕಳವಾಣಿ ಯೂಟ್ಯೂಬ್ ಚಾನೆಲ್ ನಲ್ಲಿ ಹಾಕಲಾಗುತ್ತೆ. ಅಲ್ಲಿ ವಿದ್ಯಾರ್ಥಿಗಳು ತಮಗೆ ಬೇಕಾದಾಗ ನೋಡಬಹುದಾಗಿದೆ.




Leave a Reply

Your email address will not be published. Required fields are marked *

error: Content is protected !!