ಬ್ರೇಕಿಂಗ್ ನ್ಯೂಸ್
Search

ತಳವಾರ ಸಮಾಜದಿಂದ ಅನಿರ್ಧಿಷ್ಟಾವಧಿ ಧರಣಿ

478

ಪ್ರಜಾಸ್ತ್ರ ಸುದ್ದಿ

ಕಲಬುರಗಿ: ತಳವಾರ ಹಾಗೂ ಪರಿವಾರ ಸಮಾಜದವರಿಗೆ ಪರಿಶಿಷ್ಟ ಪಂಗಡ ಪ್ರಮಾಣಪತ್ರ ನೀಡುವ ಸಂಬಂಧ, ಅನಿರ್ಧಿಷ್ಟಾವಧಿ ಧರಣಿ ನಡೆಸಲು ನಿರ್ಧರಿಸಲಾಗಿದೆ ಎಂದು ಸಮಾಜದ ಮುಖಂಡರು ತಿಳಿಸಿದ್ದಾರೆ.

ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ತಳವಾರ, ಪರಿವಾರ ಎಸ್ಟಿ ಹೋರಾಟ ಸಮಿತಿ ಮುಖಂಡರು, ಆಗಸ್ಟ್ 28ರಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ತಳವಾರ, ಪರಿವಾರ ಸಮುದಾಯಗಳು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿವೆ. ಈ ಕಾರಣಕ್ಕೆ ಪರಿಶಿಷ್ಟ ಪಂಗಡ ಪಟ್ಟಿಗೆ ಸೇರ್ಪಡೆ ಮಾಡಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ರಾಜ್ಯ ಸರ್ಕಾರವೂ ಆದೇಶ ಹೊರಡಿಸಿತ್ತು. ಆದ್ರೆ, ಮತ್ತೆ ರಾಜ್ಯ ಹಿಂದುಳಿದ ವರ್ಗದ ಪಟ್ಟಿಯಿಂದ ಕೈಬಿಟ್ಟು ಅನ್ಯಾಯ ಮಾಡ್ತಿದೆ. ಅಧಿಕಾರಿಗಳಿಗೂ ವಾಸ್ತವಾಂಶ ಗೊತ್ತಿದ್ರೂ ಸತ್ಯ ಮುಚ್ಚಿಟ್ಟು ನಮ್ಮ ಸಾಂವಿಧಾನಿಕ ಹಕ್ಕುಗಳನ್ನು ಕಸಿದುಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ರು.

ಈ ವೇಳೆ ಡಾ. ಸರದಾರ ರಾಯಪ್ಪ, ರಾಜೇಂದ್ರ ರಾಜವಾಳ, ದೇವೇಂದ್ರ ಕೆ ಚಿಗರಳ್ಳಿ, ರಾಚಣ್ಣ ಯಡ್ರಾಮಿ, ಶರಣು ಕೋಲಿ, ಕರಣ ಬಿರಾದಾರ, ಚಂದ್ರಶೇಖರ ಜಮಾದಾರ, ಅನಿಲ ವಚ್ಚಾ, ಸಾಬಣ್ಣ ಜಾಲಗಾರ, ಶಶಿಕುಮಾರ ಸೇರಿ ಅನೇಕರು ಭಾಗವಹಿಸಿದ್ರು.




Leave a Reply

Your email address will not be published. Required fields are marked *

error: Content is protected !!