ಬ್ರೇಕಿಂಗ್ ನ್ಯೂಸ್
Search

ನಾಳೆ ಜಿಂಬಾಬ್ವೆ ವಿರುದ್ಧ ಭಾರತ ಕಣಕ್ಕೆ

219

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಭಾನುವಾರ ಭಾರತ ಹಾಗೂ ಜಿಂಬಾಬ್ವೆ ನಡುವೆ ಪಂದ್ಯ ನಡೆಯಲಿದೆ. ಸೂಪರ್ 12ರ ಕೊನೆಯ ಪಂದ್ಯವನ್ನು ಭಾರತ ಆಡಲಿದೆ. ಈಗ 4 ಪಂದ್ಯಗಳಲ್ಲಿ 3ರಲ್ಲಿ ಗೆದ್ದು 1ರಲ್ಲಿ ಸೋತು 6 ಅಂಕಗಳೊಂದಿಗೆ 2ನೇ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ಜಿಂಬಾಬ್ವೆ ವಿರುದ್ಧ ಸೈಮಿ ಫೈನಲ್ ಪ್ರವೇಶ ಪಡೆಯಲಿದೆ.

5 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾ ಇದೆ. 4 ಅಂಕಗಳೊಂದಿಗೆ ಪಾಕಿಸ್ಥಾನ 3ನೇ ಸ್ಥಾನದಲ್ಲಿದೆ. ಇಷ್ಟೇ ಅಂಕ ಹೊಂದಿರುವ ಬಾಂಗ್ಲಾದೇಶ ರನ್ ರೇಟ್ ಆಧಾರದಲ್ಲಿ 4ನೇ ಸ್ಥಾನದಲ್ಲಿದೆ. ಹೀಗಾಗಿ ಭಾನುವಾರದ ಪಂದ್ಯದಲ್ಲಿ ಭಾರತ ಜಿಂಬಾಬ್ವೆ ವಿರುದ್ಧ ಗೆಲುವು ಸಾಧಿಸಿದರೆ ನೇರವಾಗಿ ಸೆಮಿ ಫೈನಲ್ ಗೆ ಎಂಟ್ರಿ ಕೊಡಲಿದೆ.

ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಮಳೆರಾಯ ಒಂದಿಷ್ಟು ಕಾಡಿದ. ಅದೆ ರೀತಿ ನಾಳೆಯ ಪಂದ್ಯಕ್ಕೂ ಮಳೆಯ ಕಾಟವಿದೆ ಎನ್ನಲಾಗುತ್ತಿದೆ. ಮೆಲ್ಬೋರ್ನ್ ಅಂಗಳದಲ್ಲಿ ಮಧ್ಯಾಹ್ನ 1.30ಕ್ಕೆ ಪಂದ್ಯ ನಡೆಯಲಿದ್ದ, ಭಾರತೀಯ ಕ್ರೀಡಾ ಪ್ರೇಮಿಗಳ ಕುತೂಹಲ ಜೋರಾಗಿದೆ.




Leave a Reply

Your email address will not be published. Required fields are marked *

error: Content is protected !!