ಸಾವಿನ ಬಳಿಕ ಖ್ಯಾತ ನಟನ ಕಾರುಗಳು ಕೋಟಿ ಕೋಟಿಗೆ ಮಾರಾಟ

493

ಬಹುತೇಕ ನಟ, ನಟಿಯರಿಗೆ ಹಾಗೂ ಆಟಗಾರರಿಗೆ ಕಾರ್, ಬೈಕ್ ಕ್ರೇಸ್ ಸಿಕ್ಕಾಪಟ್ಟೆ ಇರುತ್ತೆ. ಅದರಲ್ಲೂ ಹಾಲಿವುಡ್ ಮಂದಿಗಂತೂ ತುಸು ಜಾಸ್ತಿನೇ ಇರುತ್ತೆ. ಅದರಲ್ಲಿ ಹಾಲಿವುಡ್ ಸ್ಟಾರ್ ನಟ ಪಾಲ್ ವಾಕರ್ ಸಹ ಒಬ್ಬರು. ಫಾಸ್ಟ್ ಆ್ಯಂಡ್ ಫ್ಯೂರಿಯಸ್ ಸೇರಿದಂತೆ ಹಾಲಿವುಡ್ ಮೂವಿ ನೋಡುವವರಿಗೆ ನಟ ಪಾಲ್ ವಾಕರ್ ಬಗ್ಗೆ ಹೆಚ್ಚಿಗೆ ಹೇಳಬೇಕಿಲ್ಲ.

ಹಾಲಿವುಡ್ ಅಂಗಳದ ಸೂಪರ್ ಸ್ಟಾರ್ ನಟ ವಿಶ್ವವಿಖ್ಯಾತಿಯನ್ನ ಪಡೆದವನು. ಅತ್ಯಂತ ಸುರದೃಪಿ ನಟ ಕೇವಲ 40ನೇ ವಯಸ್ಸಿನಲ್ಲಿ ಕಾರು ಅಪಘಾತದಲ್ಲಿಯೇ ಸಾವನ್ನಪಿದ್ದು ದುರಂತ. 2013ರಲ್ಲಿ ಸಾಂಟಾ ಕ್ಲಾರಿಟಾದಲ್ಲಿ ಪೋರ್ಷೆ ಕಾರೆರಾ ಜಿಟಿ ಕಾರ್ ಅಪಘಾತದಲ್ಲಿ ಮೃತಪಟ್ಟ. ಇಂಥಾ ನಟನ ನೆಚ್ಚಿನ ಕಾರುಗಳನ್ನ ಇದೀಗ ಹರಾಜು ಹಾಕಲಾಗಿದೆ.

ಜನವರಿ 14 ರಿಂದ 18ರ ವರೆಗೆ ನಡೆದ ಕಾರ್ ಹರಾಜಿನಲ್ಲಿ 21 ವಾಹನಗಳನ್ನ ಇಡಲಾಗಿತ್ತು. ಈ ವೇಳೆ ಕೆಲವೇ ಕೆಲವು ವಾಹನಳು ಮಾರಾಟವಾಗಿದ್ದು ಇದ್ರಿಂದ 23 ಲಕ್ಷ ಡಾಲರ್ ಸಂಗ್ರಹವಾಗಿದೆ. ಅಂದ್ರೆ, 16.40 ಕೋಟಿ ರೂಪಾಯಿ. ಇದನ್ನ ನಟನ ಪುತ್ರ ಮಿಡೊ ರೇನ್ ವಾಕರ್ ಟ್ರಸ್ಟ್ ಗೆ ನೀಡಲಾಗಿದೆ. ಆಕೆಗೀಗ 21 ವರ್ಷ.




Leave a Reply

Your email address will not be published. Required fields are marked *

error: Content is protected !!