‘ಸೈರಾ’ ಸಿನ್ಮಾ ಬಗ್ಗೆ ಏನಂತಾರೆ ಸಿನಿ ಪ್ರಿಯರು?

502

ಮೆಗಾಸ್ಟಾರ್ ಚಿರಂಜೀವಿ ಸೇರಿದಂತೆ ಬಾಲಿವುಡ್, ಸ್ಯಾಂಡಲ್ ವುಡ್, ಕಾಲಿವುಡ್ ಸಿನಿ ದಿಗ್ಗಜರು ಇರುವ ಸೈರಾ ನರಸಿಂಹರೆಡ್ಡಿ ಸಿನಿಮಾ ರಿಲೀಸ್ ಆಗಿದೆ. ತೆಲುಗು, ತಮಿಳು ಸೇರಿದಂತೆ ಕನ್ನಡದಲ್ಲಿಯೂ ರಿಲೀಸ್ ಆಗಿರುವ ಮೂವಿ ನೋಡಿದ ಪ್ರೇಕ್ಷಕರ ಅಭಿಪ್ರಾಯ ಇಲ್ಲಿದೆ.

ಚಿರಂಜೀವಿ, ಅಮಿತಾಬ ಬಚ್ಚನ್, ಕಿಚ್ಚ ಸುದೀಪ, ವಿಜಯ ಸೇತುಪತಿ, ಅನುಷ್ಕಾ ಶೆಟ್ಟಿ, ತಮನ್ನಾ ಭಾಟಿಯಾ, ನಯನತಾರಾ ಸೇರಿದಂತೆ ಮಲ್ಟಿ ಸ್ಟಾರ್ ಮೂವಿ ತುಂಬಾ ರಿಚ್ ಆಗಿ ಬಂದಿದೆ ಅಂತಾರೆ. 1847ರಲ್ಲಿ ನಡೆದ ಸಣ್ಣ ಕಥಾಹಂದರ ಹೊಂದಿರುವ ಮೂವಿಯನ್ನ 2 ಗಂಟೆ 50 ನಿಮಿಷದ ತನಕ ತೆಗೆದುಕೊಂಡು ಹೋಗಿರುವುದು ಸ್ವಲ್ಪ ಬೋರ್ ಆಗುತ್ತೆ ಅಂತೆ.

ಝಾನ್ಸಿ ರಾಣಿ ಲಕ್ಷ್ಮಿಬಾಯಿ ಪಾತ್ರದಲ್ಲಿ ಅನುಷ್ಕಾ ಶೆಟ್ಟಿ, ರಾಯಲಸೀಮೆ ನಾಯಕ ನರಸಿಂಹರೆಡ್ಡಿ ಪಾತ್ರದಲ್ಲಿ ಚಿರಂಜೀವಿ, ಪಕ್ಕದ ರಾಜ್ಯದ ಅವುಕರಾಜನ ಪಾತ್ರದಲ್ಲಿ ಕಿಚ್ಚ ಸುದೀಪ, ನರಸಿಂಹನ ಗುರು ಗೋಸಾಯಿ ವೆಂಕಣ್ಣನ ಪಾತ್ರ ಬಿಗ್ ಬಿ ಸೇರಿದಂತೆ ಎಲ್ಲರೂ ಚೆನ್ನಾಗಿ ನಟಿಸಿದ್ದಾರೆ. ಹೀಗಾಗಿ ಒಂದು ಬಾರಿ ನೋಡಬಹುದು ಅಂತಿದ್ದಾರೆ.

ಐತಿಹಾಸಿಕ ಕಥೆಯ ಜೊತೆ ಒಂದಿಷ್ಟು ಕಾಲ್ಪನಿಕ ದೃಶ್ಯಗಳು, ಕಮರ್ಷಿಯಲ್ ವಿಚಾರಕ್ಕೆ ಬೇಕಾದ ಕೆಲ ಕೆಲಸ ನೋಡುಗರನ್ನ ಹಿಡಿದಿಡುತ್ತೆ ಅಂತಾರೆ. ಕನ್ನಡದಲ್ಲಿ ನೋಡಿದ ಸಿನಿ ಪ್ರಿಯರು, ಇದೊಂದು ಡಬ್ ಮೂವಿ ಅನ್ನೋ ಫೀಲ್ ಬರುವುದಿಲ್ಲ ಅನ್ನೋ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!