ತಳವಾರ ಎಸ್ಟಿ ಪ್ರಮಾಣ ಪತ್ರ ವಿಳಂಬಕ್ಕೆ ಅಧಿವೇಶನದಲ್ಲಿ ಉತ್ತರ ಸಿಗುತ್ತಾ?

549

ಪ್ರಜಾಸ್ತ್ರ ಸುದ್ದಿ

ವಿಜಯಪುರ: ತಳವಾರ ಹಾಗೂ ಪರಿವಾರ ಸಮುದಾಯಕ್ಕೆ ಪರಿಶಿಷ್ಟ ಪಂಗಡ ಪ್ರಮಾಣ ಪತ್ರ ನೀಡಬೇಕು ಎಂದು ದಶಕಗಳಿಂದ ಹೋರಾಟ ಮಾಡಿಕೊಂಡು ಬರಲಾಗುತ್ತಿದೆ. ಆದರೆ, ಯಾವ ಸರ್ಕಾರವೂ ನ್ಯಾಯ ಒದಗಿಸುವ ಕೆಲಸ ಮಾಡುತ್ತಿಲ್ಲವೆಂದು ಸಮಾಜದ ಮುಖಂಡರು ಕಿಡಿ ಕಾರುತ್ತಿದ್ದಾರೆ.

ಸಿಂದಗಿ ಹಾಗೂ ಹಾನಗಲ್ ಉಪ ಚುನಾವಣೆಯಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಆದಿಯಾಗಿ ಸಚಿವರೆಲ್ಲ ಮಾತು  ಕೊಟ್ಟಿದ್ದರು. ಆದರೆ, ಇದುವರೆಗೂ ತಳವಾರ ಪರಿವಾರ ಸಮುದಾಯಕ್ಕೆ ಎಸ್ಟಿ ಪ್ರಮಾಣ ಪತ್ರ ಸಿಕ್ಕಿಲ್ಲ. ಚುನಾವಣೆಯಲ್ಲಿ ಸುಳ್ಳು ಭರವಸೆ ನೀಡಿ ಮಾತು ತಪ್ಪಿದ ಸರ್ಕಾರದ ವಿರುದ್ಧ ಜಿಲ್ಲೆಯ ತಳವಾರ, ಪರಿವಾರ ಸಮಾಜದ ಮುಖಂಡರು, ಯುವ ಜನತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸೆಪ್ಟೆಂಬರ್ 12ರಿಂದ 23ರ ತನಕ ನಡೆಯಲಿರುವ ಅಧಿವೇಶನದಲ್ಲಿ ಏನಾದರೂ ಈ ಬಗ್ಗೆ ಚರ್ಚೆಯಾಗಿ, ಯಾವ ಕಾರಣಕ್ಕೆ ಸರ್ಟಿಫಿಕೇಟ್ ನೀಡಲು ವಿಳಂಬವಾಗುತ್ತಿದೆ ಅನ್ನೋದಕ್ಕೆ ಉತ್ತರ ಸಿಗುತ್ತಾ ಅಥವ ವಿವಾದಾತ್ಮಕ ವಿಷಯಗಳಲ್ಲೇ ಅಧಿವೇಶನ ಮುಗಿಯುತ್ತಾ ಅನ್ನೋ ಪ್ರಶ್ನೆ ಸಮುದಾಯದ ಜನರಲ್ಲಿ ಮೂಡಿದೆ.




Leave a Reply

Your email address will not be published. Required fields are marked *

error: Content is protected !!