ಅರವಟಗಿಯಲ್ಲಿ ಕಳ್ಳತನ: ಓರ್ವ ಬಂಧನ

329

ಪ್ರಜಾಸ್ತ್ರ ಅಪರಾಧ ಸುದ್ದಿ

ಅಳ್ನಾವರ: ತಾಲೂಕಿನ ಅರವಟಗಿ ಗ್ರಾಮದಲ್ಲಿ ಗ್ಯಾರೇಜ್ ವೊಂದರಲ್ಲಿನ 10 ನೀರಿನ ಪಂಪ್ ಹಾಗೂ 7 ಮೋಟರ್ ಗಳನ್ನು ಕಳೆದ ಮಾರ್ಚ್ 13ರಂದು ಕಳ್ಳತನ ಮಾಡಲಾಗಿತ್ತು. ಈ ಸಂಬಂಧ ಓರ್ವ ಆರೋಪಿಯನ್ನು ಬಂಧಿಸಲಾಗಿದೆ.

ಅಳ್ನಾವರದ ಕಡಬಗಟ್ಟಿ ಕ್ರಾಸ್ ಬಳಿ ಆನಂದ‌ ಭೀಮಪ್ಪ ಗೊಲ್ಲರ ಎಂಬಾತನನ್ನು ಬಂಧಿಸಲಾಗಿದೆ. ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. ಬಂಧಿತನಿಂದ ಅಶೋಕ ಲೈಲೆಂಡ್ ವಾಹನ, ಸುಮಾರು 130ಕ್ಕೂ ಹೆಚ್ಚು ಸೆಂಟ್ರಿಂಗ್ ಪ್ಲೇಟ್ ಗಳು, ಒಂದು ಬೈಕ್ ಹಾಗೂ 60 ಸಾವಿರ ರೂಪಾಯಿ ನಗದು ವಶ ಪಡಿಸಿಕೊಳ್ಳಲಾಗಿದೆ.

ಚಂದ್ರಶೇಖರ ಕಲ್ಲಪ್ಪ ಅಮ್ಮನಗಿ ಎಂಬುವರ ಗ್ಯಾರೇಜ್ ನಲ್ಲಿ ಕಳ್ಳತನ ನಡೆಸಲಾಗಿತ್ತು. ಬಂಧಿತ ಆರೋಪಿ ಧಾರವಾಡ ಮೂಲದವನಾಗಿದ್ದಾನೆ.


TAG


Leave a Reply

Your email address will not be published. Required fields are marked *

error: Content is protected !!