ರಾಜ್ಯದಲ್ಲಿಂದು 9140 ಸೋಂಕಿತರು.. 94 ಜನರ ಸಾವು

277

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕರ್ನಾಟಕದಲ್ಲಿ ಕಳೆದ 24 ಗಂಟೆಯಲ್ಲಿ 9140 ಜನರಲ್ಲಿ ಕೋವಿಡ್ 19 ದೃಢಪಟ್ಟಿದೆ. ಇದರೊಂದಿಗೆ ಸತತ 3ನೇ ದಿನವೂ 9 ಸಾವಿರಕ್ಕೂ ಅಧಿಕ ಜನರಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆ. ಇದುವರೆಗೂ 4,49,551 ಜನರಲ್ಲಿ ಸೋಂಕು ದೃಢಪಟ್ಟಿದೆ.

ಇಂದು 9,557 ಜನರು ಡಿಸ್ಚಾರ್ಜ್ ಆಗಿದ್ದು, ಒಟ್ಟು 3,44,556 ಜನರು ಗುಣಮುಖರಾಗಿದ್ದಾರೆ. 97,815 ಪ್ರಕರಣಗಳು ಸಕ್ರಿಯವಾಗಿವೆ. ಇಂದು 94 ಜನರು ಮೃತಪಟ್ಟಿದ್ದು ಸಾವಿನ ಸಂಖ್ಯೆ 7,161ಕ್ಕೆ ಏರಿಕೆಯಾಗಿದೆ. 795 ಜನರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲಾವಾರು ಸೋಂಕಿತರ ವಿವರ ಹೀಗಿದೆ..

ಬಾಗಲಕೋಟೆ 175, ಬಳ್ಳಾರಿ 366, ಬೆಳಗಾವಿ 201, ಬೆಂ.ಗ್ರಾ 211, ಬೆಂ.ನ 3552, ಬೀದರ 101, ಚಾಮರಾಜನಗರ 60, ಚಿಕ್ಕಬಳ್ಳಾಪುರ 101, ಚಿಕ್ಕಮಗಳೂರು 159, ಚಿತ್ರದುರ್ಗ 277, ದ.ಕ 401, ದಾವಣಗೆರೆ 267, ಧಾರವಾಡ 239, ಗದಗ 49, ಹಾಸನ 324, ಹಾವೇರಿ 213, ಕಲಬುರಗಿ 222, ಕೊಡಗು 27, ಕೋಲಾರ 53, ಕೊಪ್ಪಳ 183, ಮಂಡ್ಯ 193, ಮೈಸೂರು 637, ರಾಯಚೂರು 131, ರಾಮನಗರ 81, ಶಿವಮೊಗ್ಗ 155, ತುಮಕೂರು 304, ಉಡುಪಿ 169, ಉ.ಕ 130, ವಿಜಯಪುರ 58, ಯಾದಗಿರಿ 151 ಜನರಲ್ಲಿ ಸೋಂಕು ದೃಢಪಟ್ಟಿದೆ.




Leave a Reply

Your email address will not be published. Required fields are marked *

error: Content is protected !!