ಮುಗಿಯಿತು 7 ವರ್ಷಗಳ ವನವಾಸ: ‘ಸೆಂಡೆ ಸ್ಪೆಲ್’ ಶ್ರೀಶಾಂತ

326

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಇಂಡಿಯನ್ ಕ್ರಿಕೆಟ್ ಟೀಂ ಮಾಜಿ ಬೌಲರ್ ಎಸ್. ಶ್ರೀಶಾಂತ ಅವರ 7 ವರ್ಷಗಳ ನಿಷೇಧ ಶಿಕ್ಷೆ ಭಾನುವಾರಕ್ಕೆ ಮುಕ್ತವಾಗ್ತಿದೆ. ಹೀಗಾಗಿ ಅವರ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಸಂಭ್ರಮ ಹಂಚಿಕೊಳ್ತಿದ್ದು, ವೆಲ್ ಕಮ್ ಬ್ಯಾಕ್ ಶ್ರೀ ಎನ್ನುತ್ತಿದ್ದಾರೆ.

ಅಲ್ದೇ, ‘ಸಂಡೆ ಸ್ಪೆಲ್’ ಎಂದು ಹೆಸರಿಟ್ಟಿದ್ದು ಟ್ವೀಟರ್ ನಲ್ಲಿ ಟ್ರೆಂಡಿಂಗ್ ಆಗಿದೆ. ವೇಗದ ಬೌಲರ್ ಬೌಲಿಂಗ್ ನ್ನ ಅಭಿಮಾನಿಗಳು ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ. ಈಗಾಗ್ಲೇ ಶ್ರೀಶಾಂತ ಬೌಲಿಂಗ್ ಅಭ್ಯಾಸ ನಡೆಸಿದ್ದಾರೆ. 2007 ಟಿ-20 ವರ್ಲ್ಡ್ ಕಪ್ ಹಾಗೂ 2011ರ ವಿಶ್ವಕಪ್ ತಂಡದಲ್ಲಿ ಆಡಿದ್ರು. ಆದ್ರೆ, 2013ರ ಐಪಿಎಲ್ ಹಗರಣದಲ್ಲಿ ಸಿಲುಕಿಕೊಂಡು ಕ್ರಿಕೆಟ್ ಕರಿಯರ್ ಅವನತಿ ಹಾದಿ ಹಿಡಿಯಿತು.

https://twitter.com/DeepakDSree/status/1304619171964043265?s=20

53 ಏಕದಿನ ಪಂದ್ಯದಲ್ಲಿ 75 ವಿಕೆಟ್, 27 ಟೆಸ್ಟ್ ಪಂದ್ಯದಲ್ಲಿ 87, 10 ಟಿ-20 ಪಂದ್ಯಗಳಲ್ಲಿ 7 ವಿಕೆಟ್ ಪಡೆದಿದ್ದಾರೆ. 37 ವರ್ಷದ ಬೌಲರ್ ಶ್ರೀಶಾಂತ ಬಿಸಿಸಿಐ ಮಾನ್ಯತೆ ಪಡೆದ ಕ್ರಿಕೆಟ್ ಮೈದಾನ ಹಾಗೂ ಅದರ ವ್ಯವಸ್ಥೆಯನ್ನ ಅಳವಡಿಸಿಕೊಳ್ಳಬಹುದಾಗಿದೆ. ಮುಂದಿನ ಐಪಿಎಲ್ ಹಾಗೂ ವರ್ಲ್ಡ್ ಕಪ್ ನಲ್ಲಿ ಆಡುವ ಕನಸು ಹೊಂದಿದ್ದಾರೆ.




Leave a Reply

Your email address will not be published. Required fields are marked *

error: Content is protected !!