ಒಂದೇ ಕುಟುಂಬದ 65 ಸದಸ್ಯರಿಂದ ಮತದಾನ

112

ಪ್ರಜಾಸ್ತ್ರ ಸುದ್ದಿ

ಚಿಕ್ಕಬಳ್ಳಾಪುರ: ರಾಜ್ಯ ವಿಧಾನಸಭಾ ಚುನಾವಣೆಯ ಮತದಾನ ನಡೆಯುತ್ತಿದೆ. 224 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಭರ್ಜರಿಯಾಗಿ ನಡೆದಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನ ನೀಡಿದ ಹಕ್ಕನ್ನು ಮತದಾರರು ಚಲಾಯಿಸುತ್ತಿದ್ದಾರೆ. ಇದರ ನಡುವೆ ಒಂದಿಷ್ಟು ವಿಶೇಷತೆಗಳು ನಡೆಯುತ್ತವೆ.

ಚಿಕ್ಕಬಳ್ಳಾಪುರದಲ್ಲಿ ಒಂದೇ ಕುಟುಂಬದ 65 ಸದಸ್ಯರು ಮತದಾನ ಮಾಡಿದ್ದಾರೆ. ನಗರದ ಬಾದಾಮ್ ಕುಟುಂಬ ಸದಸ್ಯರು ಮತ ಹಾಕಿದ್ದಾರೆ. ಈ ಕುರಿತು ಮಾತನಾಡಿರುವ ಕುಟುಂಬದ ಸದಸ್ಯ ಗೋಪಾಲಕೃಷ್ಣ, ನಮ್ಮ ಮನೆಯಲ್ಲಿ 65 ಮತಗಳಿವೆ. ಇದುವರೆಗೂ 15 ಚುನಾವಣೆಗಳನ್ನು ಒಟ್ಟಿಗೆ ಮತದಾನ ಮಾಡಿದ್ದೇವೆ. ಮುಂದಿನ ಚುನಾವಣೆಗಳಲ್ಲೂ ನಾವೆಲ್ಲ ಒಟ್ಟಿಗೆ ಮತದಾನ ಮಾಡುತ್ತೇವೆ ಎಂದರು.




Leave a Reply

Your email address will not be published. Required fields are marked *

error: Content is protected !!