ಪ್ರಧಾನಿಗೆ ಶಿಕ್ಷಣ ಬೇಕು ಅನ್ನೋದು ಇದಕ್ಕೆ: ಸಿಎಂ ಕೇಜ್ರಿವಾಲ್

173

ಪ್ರಜಾಸ್ತ್ರ ಸುದ್ದಿ

ನವದೆಹಲಿ: 2 ಸಾವಿರ ರೂಪಾಯಿ ನೋಟು ಹಿಂದಕ್ಕೆ ಪಡೆಯುತ್ತಿರುವ ಕೇಂದ್ರ ಸರ್ಕಾರದ ಕ್ರಮದ ಬಗ್ಗೆ ವಿಪಕ್ಷಗಳಿಂದ ಸಾಕಷ್ಟು ಟೀಕೆಗಳು ಕೇಳಿ ಬರುತ್ತಿವೆ. ಈ ಕುರಿತು ಟ್ವೀಟ್ ಮಾಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಇದಕ್ಕೆ ಹೇಳೋದು ಪ್ರಧಾನಿಗೆ ಶಿಕ್ಷಣ ಬೇಕು ಎಂದು ಅಂತಾ ಕಾಲೆಳೆದಿದ್ದಾರೆ.

2 ಸಾವಿರ ರೂಪಾಯಿ ನೋಟ್ ಬಂದರೆ ಭ್ರಷ್ಟಾಚಾರ ನಿಲ್ಲುತ್ತೆ ಎಂದವರು, ಈಗ 2 ಸಾವಿರ ರೂಪಾಯಿ ನೋಟ್ ಬ್ಯಾನ್ ಮಾಡಿದರೆ ಭ್ರಷ್ಟಾಚಾರ ಅಂತ್ಯವಾಗುತ್ತೆ ಎಂದು. ಇದಕ್ಕೆ ನಾವು ಹೇಳುತ್ತಿರುವುದು ಪ್ರಧಾನಿಗೆ ಶಿಕ್ಷಣ ಬೇಕು ಎಂದು. ಅನಕ್ಷರಸ್ಥ ಪ್ರಧಾನಿಗೆ ಯಾರು ಏನು ಬೇಕಾದರೂ ಹೇಳಿದರೂ ಅದು ಅವರಿಗೆ ಅರ್ಥವಾಗುತ್ತಿಲ್ಲ. ಜನರು ಸಮಸ್ಯೆ ಎದುರಿಸುತ್ತಿದ್ದಾರೆ ಅಂತಾ ಟ್ವೀಟ್ ಮಾಡಿದ್ದಾರೆ.

ಈ ಹಿಂದೆ ಪ್ರಧಾನಿ ಮೋದಿ ಅವರ ಶಿಕ್ಷಣದ ಕುರಿತು ಮಾಹಿತಿ ಕೇಳಿದ್ದರು. ಆಗ ಗುಜರಾತ್ ಹೈಕೋರ್ಟ್ ಪ್ರಧಾನಿಯ ವಿದ್ಯಾರ್ಹತೆ ಬಹಿರಂಗ ಪಡಿಸುವ ಅಗತ್ಯವಿಲ್ಲ ಎಂದು ಹೇಳಿತ್ತು. ಜೊತೆಗೆ ಅರವಿಂದ್ ಕೇಜ್ರಿವಾಲ್ ಅವರಿಗೆ 20 ಸಾವಿರ ರೂಪಾಯಿ ದಂಡ ವಿಧಿಸಿತ್ತು.




Leave a Reply

Your email address will not be published. Required fields are marked *

error: Content is protected !!