ತನ್ನ ನೌಕರರಿಗೆ 100 ಕಾರು ಗಿಫ್ಟ್ ಕೊಟ್ಟ ಕಂಪನಿ

538

ಪ್ರಜಾಸ್ತ್ರ ಸುದ್ದಿ

ಚೆನ್ನೈ: ಕಳೆದ 10 ವರ್ಷಗಳಿಂದ ತನ್ನ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ 100 ನೌಕರರಿಗೆ ಮಾರುತಿ ಸುಜುಕಿ ಕಾರು ಗಿಫ್ಟ್ ನೀಡಿದೆ. ಕಾರ್ಪೂರೇಟ್ ವಲಯದ ಐಡಿಯಾಸ್-2 ಅನ್ನೋ ಕಂಪನಿ ಇಂತಹದೊಂದು ಉಡುಗರೆ ನೀಡಿದೆ.

ತನ್ನ ಕಂಪನಿಯ ಯಶಸ್ಸಿನ ಹಿಂದೆ ನೌಕರರ ಪರಿಶ್ರಮವಿದೆ. ಅದನ್ನು ಅವರಿಗೆ ಮರಳಿ ನೀಡುತ್ತಿದ್ದೇವೆ ಎಂದು ಮಾರ್ಕೆಟಿಂಗ್ ಮುಖ್ಯಸ್ಥ ಸುಬ್ರಮಣಿಯನ್ ಹೇಳಿದ್ದಾರೆ. ಇದು ಉಡುಗರೆ ಅಲ್ಲ, ಅವರ ಪರಿಶ್ರಮದ ಫಲ ಎಂದು ಸಂಸ್ಥೆ ಸಂಸ್ಥಾಪಕ ಮುರುಳಿ ವಿವೇಕಾನಂದಂ ಹೇಳಿದ್ದಾರೆ.

ಐಡಿಯಾಸ್-2 ಕಂಪನಿಯಲ್ಲಿ ಒಟ್ಟು 500 ಜನರು ಕೆಲಸ ಮಾಡುತ್ತಿದ್ದಾರೆ. ಇವರಿಗೆ ಆಗಾಗ ಒಂದಲ್ಲ ಒಂದು ಉಡುಗರೆ ನೀಡುತ್ತಲೇ ಬರುತ್ತಿದೆ ಈ ಕಂಪನಿ. ಹೀಗಾಗಿ ಇಲ್ಲಿನ ಸಿಬ್ಬಂದಿ ಸಹ ಅತ್ಯುನ್ನತವಾಗಿ ಕೆಲಸ ಮಾಡುತ್ತಿದೆ.




Leave a Reply

Your email address will not be published. Required fields are marked *

error: Content is protected !!