ದೇಶದಲ್ಲಿ ಇದುವರೆಗೂ 4,650 ಕೋಟಿ ನಗದು, ವಸ್ತುಗಳು ವಶ

70

ಪ್ರಜಾಸ್ತ್ರ ಸುದ್ದಿ

ನವದೆಹಲಿ: ದೇಶದ 75 ವರ್ಷಗಳ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಅಪಾರ ಪ್ರಮಾಣದ ಅಕ್ರಮ ಹಣ, ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ. ನೀತಿ ಸಂಹಿತೆ ಜಾರಿಯಾದ ದಿನದಿಂದ ಇಲ್ಲಿಯವರೆಗೂ ಬರೋಬ್ಬರಿ 4,650 ಕೋಟಿ ರೂಪಾಯಿ ನಗದು, ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇದರಲ್ಲಿ ಶೇಕಡ 45ರಷ್ಟು ಡ್ರಗ್ಸ್ ಇದೆ ಎಂದು ತಿಳಿಸಲಾಗಿದೆ.

2019ರ ಲೋಕಸಭಾ ಚುನಾವಣೆಯ ಇಡೀ ಪ್ರಕ್ರಿಯೆಲ್ಲಿ ವಶಪಡಿಸಿಕೊಂಡ ಹಣಕ್ಕಿಂತ 3,475 ಕೋಟಿ ರೂಪಾಯಿ ಹೆಚ್ಚಾಗಿದೆಯಂತೆ. 395.39 ಕೋಟಿ ರೂಪಾಯಿ ನಗದು, 489.31 ಕೋಟಿ ಮೌಲ್ಯದ ಮದ್ಯ, 562.10 ಕೋಟಿ ಮೌಲ್ಯದ ಅಮೂಲ್ಯ ಲೋಹಗಳು, 1,142.49 ಕೋಟಿ ಮೌಲ್ಯದ ಉಡುಗರೆಗಳು ಸೇರಿ ಇತರೆ ವಸ್ತುಗಳನ್ನು ವಶ ಪಡಿಸಿಕೊಳ್ಳಲಾಗಿದೆ.

18ನೇ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ 21 ರಾಜ್ಯಗಳಲ್ಲಿ ಇದೇ ಶುಕ್ರವಾರ ಶುರುವಾಗುತ್ತಿದೆ. ಕರ್ನಾಟಕದಲ್ಲಿ ಏಪ್ರಿಲ್ 26ರಂದು ಮೊದಲ ಹಂತದ ಚುನಾವಣೆ ನಡೆಯುತ್ತಿದೆ.




Leave a Reply

Your email address will not be published. Required fields are marked *

error: Content is protected !!