ರನ್ ಹೊಳೆಯಲ್ಲಿ ಕೊಚ್ಚಿ ಹೋದ ಆರ್ ಸಿಬಿ

104

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಬೆಂಗಳೂರು: ಐಪಿಎಲ್ ಟೂರ್ನಿಯ 30ನೇ ಪಂದ್ಯದಲ್ಲಿ ರನ್ ಹೊಳೆ ಹರಿಯಿತು. ಸೋಮವಾರ ರಾತ್ರಿ ಇಲ್ಲಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಎರಡು ತಂಡಗಳಿಂದ ಬರೋಬ್ಬರಿ 543 ರನ್ ಗಳು ಬಂದಿವೆ.

ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಆರ್ ಸಿಬಿ ನಾಯಕ ಫಫ್ ಡುಪ್ಲಸಿ ಲೆಕ್ಕಾಚಾರವನ್ನು ಸನ್ ರೈಸರ್ಸ್ ಹೆದ್ರಾಬಾದ್ ಪಡೆ ಪೂರ್ತಿ ತಲೆ ಕೆಳಗಾಗುವಂತೆ ಮಾಡಿತು. ಟ್ರಾವಿಸ್ ಹೆಡ್ ಕೇವಲ 39 ಬೌಲ್ ಗಳಲ್ಲಿ ಶತಕ ಸಿಡಿಸಿ ರನ್ ಮಳೆ ಸುರಿಸಿದ. ಇದರಲ್ಲಿ 8 ಸಿಕ್ಸ್, 9 ಫೋರ್ ಗಳಿವೆ. 7 ಸಿಕ್ಸ್, 2 ಫೋರ್ ಗಳಿಂದಿಗೆ ಹರ್ನಿಚ್ 31 ಬೌಲ್ ಗಳಲ್ಲಿ 67 ರನ್ ಚಚ್ಚಿದರು.

ಅಬ್ದಲ್ ಶಮದ್ 10 ಬೌಲ್ ಗಳಲ್ಲಿ ಅಜೇಯ 37 ರನ್(3 ಸಿಕ್ಸ್, 4 ಫೋರ್), ಮಾರ್ಕಂ 17 ಬೌಲ್ ಗಳಲ್ಲಿ 32 ರನ್(2 ಸಿಕ್ಸ್, 2 ಫೋರ್), ಅಭಿಷೇಕ್ ಶರ್ಮಾ 22 ಬೌಲ್ ಗಳಲ್ಲಿ 34 ರನ್(2 ಸಿಕ್ಸ್, 2 ಫೋರ್) ಹೀಗೆ ಬೆಂಗಳೂರು ಬೌಲರ್ ಗಳನ್ನು ಪೂರ್ತಿಯಾಗಿ ಬೆಂಡೆತ್ತಿದರು. ಕೇವಲ 3 ವಿಕೆಟ್ ಕಳೆದುಕೊಂಡು ಬರೋಬ್ಬರಿ 287 ರನ್ ಗಳಿಸಿತು. ಈ ಮೊಲಹ ಎಚ್ ಆರ್ ಎಚ್ ಹೊಸ ದಾಖಲೆ ಬರೆಯಿತು.

ಈ ಬೃಹತ್ ಸ್ಕೋರ್ ಚೇಸ್ ಮಾಡಿದ ಬೆಂಗಳೂರು ಸಹ ಗೆಲ್ಲುವ ಹಂತಕ್ಕೆ ಬಂದು ಸೋಲುವ ಮೂಲಕ ಅಭಿಮಾನಿಗಳಿಗೆ ಮತ್ತೆ ನಿರಾಸೆ ಮೂಡಿಸಿತು. ಕೊಹ್ಲಿ 42(2 ಸಿಕ್ಸ್, 6 ಫೋರ್), ನಾಯಕ ಡುಪ್ಲಸಿ 62(4 ಸಿಕ್ಸ್, 7 ಫೋರ್) ಬಾರಿಸಿದರು. ಆಪ್ತಬಾಂಧವ ದಿನೇಶ್ ಕಾರ್ತಿಕ್ 35 ಬೌಲ್ ಗಳಲ್ಲಿ 7 ಸಿಕ್ಸ್, 5 ಫೋರ್ ಗಳೊಂದಿಗೆ 83 ರನ್ ಗಳಿಸಿದರು. ಹೀಗಾಗಿ ಆರ್ ಸಿಬಿ 250 ರನ್ ದಾಟಿತು. ಜಾಕ್ಸ್ 7, ರಜತ್ ಪಟಿದಾರ್ 9, ಸೌರವ್ ಚೌವ್ಹಾಣ್ 0 ಸುತ್ತಿದರು. ಅಂತಿಮವಾಗಿ ಆರ್ ಸಿಬಿ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 262 ರನ್ ಗಳಿಸಿ 25 ರನ್ ಗಳಿಂದ ಸೋತಿತು. ಆಡಿರುವ 7 ಪಂದ್ಯಗಳಲ್ಲಿ 6ರಲ್ಲಿ ಸೋತಿದೆ. ಹೀಗಾಗಿ ಟೂರ್ನಿಯಿಂದ ಹೊರ ಬೀಳುವ ಸಾಧ್ಯತೆ ಹೆಚ್ಚಿದೆ.




Leave a Reply

Your email address will not be published. Required fields are marked *

error: Content is protected !!