ಕೋಲಾರದಲ್ಲಿ ಹಾಡಹಗಲೇ ಯುವತಿ ಹತ್ಯೆ

354

ಪ್ರಜಾಸ್ತ್ರ ಅಪರಾಧ ಸುದ್ದಿ

ಕೋಲಾರ: ಹಾಡಹಗಲೇ ಯುವತಿಯನ್ನ ಹತ್ಯೆ ಮಾಡಿರುವ ಘಟನೆ ನಡೆದಿದೆ. ಮಹಾಲಕ್ಷ್ಮೀ ಲೇಔಟ್ ನಲ್ಲಿರುವ ಫ್ಯಾನ್ಸಿ ಸ್ಟೋರ್ ಗೆ ನುಗ್ಗಿದ ಅಪರಿಚಿತರು ಮನಸೋಇಚ್ಛೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ. ನೀಲವೇಣಿ(29) ಕೊಲೆಯಾದ ದುರ್ದೈವಿ.

ತಾಲೂಕಿನ ನಾಗನಾಯಕನಹಳ್ಳಿಯ ನಾಗವೇಣಿಯ ಮೇಲೆ ಅಪರಿಚಿತರು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾರೆ. ಈ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಈ ಬಗ್ಗೆ ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯಾವ ಕಾರಣಕ್ಕೆ ಯುವತಿಯನ್ನ ಹತ್ಯೆ ಮಾಡಲಾಗಿದೆ ಅನ್ನೋದರ ತನಿಖೆ ನಡೆಯುತ್ತಿದೆ.




Leave a Reply

Your email address will not be published. Required fields are marked *

error: Content is protected !!