ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಈಗಾಗ್ಲೇ ಎಸ್ಎಸ್ಎಲ್ ಸಿ ಪರೀಕ್ಷಾ ವೇಳಾಪಟ್ಟಿ ರಿಲೀಸ್ ಮಾಡಿರುವ ಶಿಕ್ಷಣ ಇಲಾಖೆ ಇದೀಗ ಪಿಯುಸಿ ವೇಳಾ ಪಟ್ಟಿ ಬಿಡುಗಡೆ ಮಾಡಿದೆ. ಮೇ 24 ರಿಂದ ಜೂನ್ 16ರ ವರೆಗೂ ಪಿಯು ಪರೀಕ್ಷೆ ನಡೆಯಲಿವೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶಕುಮಾರ ತಿಳಿಸಿದ್ದಾರೆ.
ಮೇ 24ಕ್ಕೆ ಇತಿಹಾಸ, 26ಕ್ಕೆ ಭೂಗೋಳಶಾಸ್ತ್ರ, 31 ಇಂಗ್ಲಿಷ್, ಜೂನ್ 2 ರಾಜ್ಯಶಾಸ್ತ್ರ, ಜೂನ್ 3 ಜೀವಶಾಸ್ತ್ರ, ಜೂನ್ 4 ಅರ್ಥಶಾಸ್ತ್ರ, ಜೂನ್ 7 ಭೌತಶಾಸ್ತ್ರ, 10ಕ್ಕೆ ಸಮಾಜಶಾಸ್ತ್ರ, 12 ಸಂಖ್ಯಾಶಾಸ್ತ್ರ ಹಾಗೂ 16ಕ್ಕೆ ಕನ್ನಡ ಪರೀಕ್ಷೆ ನಡೆಯಲಿದೆ ಎಂದು ತಿಳಿಸಿದ್ದಾರೆ.