‘ರೆಮೋ’ ಸಿನ್ಮಾ ಹಾಡಿಗೆ 360 ಡಿಗ್ರಿ ಗ್ರಾಫಿಕ್ಸ್

378

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ನಿರ್ದೇಶಕ ಪವನ ಒಡೆಯರ್ ನಿರ್ದೇಶನ ರೆಮೋ ಚಿತ್ರದ ಹಾಡಿನ ಚಿತ್ರದ ಶೂಟಿಂಗ್ ವಿಚಾರ ಗಾಂಧಿ ನಗರದಲ್ಲಿ ಒಂದಿಷ್ಟು ಚರ್ಚೆ ನಡೆಸಿದೆ. ಯಾಕಂದ್ರೆ, ಈ ಚಿತ್ರದ ಸಾಂಗ್ ಶೂಟಿಂಗ್ ಗೆ 360 ಡಿಗ್ರಿ ಗ್ರಾಫಿಕ್ಸ್ ತಂತ್ರಜ್ಞಾನ ಬಳಸಲಾಗ್ತಿದೆ.

ಮ್ಯೂಸಿಕಲ್ ಲವ್ ಡ್ರಾಮಾದ ರೆಮೋದ ಬಹುತೇಕ ಶೂಟಿಂಗ್ ಕಂಪ್ಲೀಟ್ ಆಗಿದೆ. ಉಳಿದಿರುವುದು ಒಂದು ಫೈಟ್ ಸೀನ್ ಹಾಗೂ 2 ಸಾಂಗ್ ಶೂಟಿಂಗ್. ಜುಲೈ 15ರಿಂದ ಚಿತ್ರೀಕರಣ ಪ್ರಾರಂಭಿಸಲು ಟೀಂ ಸಿದ್ಧತೆ ನಡೆಸಿದ್ದು, 2 ಹಾಡುಗಳಿಗೆ 360 ಡಿಗ್ರಿ ಗ್ರಾಫಿಕ್ಸ್ ಬಳಸಿಕೊಳ್ಳಲು ಪ್ಲಾನ್ ಮಾಡಲಾಗಿದೆ.

ಬೆಂಗಳೂರು, ಮುಂಬೈ ಹಾಗೂ ಚೆನ್ನೈ ಎರಡು ಕಂಪನಿಗಳ ಜೊತೆ ಈಗಾಗ್ಲೇ ಸಂಪರ್ಕಿಸಿದ್ದು, ಇವರೊಂದಿಗೆ ಕೆಲಸ ಹಂಚಿಕೊಳ್ಳಲಿದ್ದೇವೆ. ನಿರ್ಮಾಪಕ ಸಿ.ಆರ್ ಮನೋಹರ ಇದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎಂದು ನಿರ್ದೇಶಕ ಪವನ ಒಡೆಯರ್ ತಿಳಿಸಿದ್ದಾರೆ. ಹೀಗಾಗಿ ವೀಕ್ಷಕರಲ್ಲಿ ಒಂದಿಷ್ಟು ಕುತೂಹಲ ಮೂಡಿದೆ.




Leave a Reply

Your email address will not be published. Required fields are marked *

error: Content is protected !!